ಕಾರ್ಕಳ : ಮದ್ಯವ್ಯಸನಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 9ರಂದು ಮರ್ಣೆ ಗ್ರಾಮದ ಮುಳ್ಳಕಾಡಿನಲ್ಲಿ ನಡೆದಿದೆ.
ದಿನೇಶ ನಾಯ್ಕ್ (48) ನೇಣಿಗೆ ಶರಣಾದವರು. ಅವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮರ್ಣೆ ಗ್ರಾಮದ ಕೈಕಂಬ ಬಳಿ ಮುಳ್ಳಕಾಡು ಎಂಬಲ್ಲಿರುವ ಮನೆಯ ಎದುರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ































