ನೀರೆ ಗ್ರಾ. ಪಂ. : ಕಸ ಎಸೆದ ವ್ಯಕ್ತಿಯಿಂದ ದಂಡ ವಸೂಲಿ

ತ್ಯಾಜ್ಯ ಕಟ್ಟಿನೊಳಗಡೆಯಿದ್ದ ಆಧಾರ್‌, ಪಾನ್‌ನಿಂದ ವ್ಯಕ್ತಿಯ ಪತ್ತೆ

ಕಾರ್ಕಳ : ನೀರೆ- ಕಣಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿಯಿಂದ ಜಂಗುಳಿವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಸಂಗ್ರಹ ಮಾಡುತ್ತಿದ್ದಾಗ ತ್ಯಾಜ್ಯ ಕಟ್ಟಿನ ಒಳಗಡೆ ಉಡುಪಿ ತೆಂಕನಿಡಿಯೂರಿನ ವ್ಯಕ್ತಿಯೋರ್ವರ ಆಧಾರ್‌ ಕಾರ್ಡ್, ಪಾನ್ ಕಾರ್ಡ್ ಸಿಕ್ಕಿದ್ದು ಅವರನ್ನು ಸಂಪರ್ಕಿಸಿದಾಗ ಕಸ ಎಸೆದಿರುವುದು ಒಪ್ಪಿಕೊಂಡಿದ್ದು ವ್ಯಕ್ತಿಯಿಂದ 2,000 ರೂ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಲಾಗಿದೆ.

ನೀರೆ ಗ್ರಾ. ಪಂ. ವ್ಯಾಪ್ತಿಯ ಉಡುಪಿ- ಕಾರ್ಕಳ ಹೆದ್ದಾರಿಯಲ್ಲಿ ಹೊರ ಭಾಗದ ಕೆಲ ಅನಾಗರಿಕರು ತ್ಯಾಜ್ಯಗಳನ್ನು ತಂದು ಎಸೆಯುತ್ತಿದ್ದು
ಪಂಚಾಯತ್‌ ಆಡಳಿತಕ್ಕೆ ಸ್ವಚ್ಛತೆ ಕಾಪಾಡುವುದೇ ಸವಾಲಾಗಿ ಪರಿಣಮಿಸಿದೆ. ಆದರೆ ಈ ಬಗ್ಗೆ ಮೊದಲಿನಿಂದಲೂ ಎಚ್ಚೆತ್ತುಕೊಂಡಿದ್ದು ಸಿಸಿಟಿವಿ ಅಳವಡಿಕೆ ದಂಡ ವಸೂಲಾತಿ ಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ನೀರೆ ಪಂ. ಆಡಳಿತ ವ್ಯಾಪ್ತಿಯ ಎಲ್ಲ ರಸ್ತೆಗಳ ಇಕ್ಕೆಲ ಹಾಗೂ ನೀರು ಹೋಗುವ ತೊಡುಗಳನ್ನು ಸ್ವಚ್ಛತೆ ಮಾಡುತ್ತಿದ್ದು ಮಳೆಗಾಲ ಪ್ರಾರಂಭವಾಗುವ ಮೊದಲು ಎಲ್ಲ ಕಸ ಕಡ್ಡಿಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಿದೆ. ಪ್ರವಾಸಿಗರು ನಿತ್ಯ ಸಂಚಾರಿಗಳು ಜನ ವಸತಿ ಇಲ್ಲದ ಪ್ರದೇಶದಲ್ಲಿ ರಸ್ತೆ ತಿರುವುಗಳಲ್ಲಿ ಕಸವನ್ನು ಪ್ರತಿದಿನ ಎಸೆದು ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಎಸೆಯುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ನಾಗರಾಜ್ ತಿಳಿಸಿದ್ದಾರೆ.









































































































error: Content is protected !!
Scroll to Top