ಪ್ರಧಾನಿ ಮೋದಿಯವರ ಇಂಧನ ಮಿತ ಬಳಕೆಯ ವಿನಂತಿಗೆ ವಿರೋಧ

ಕಾಂಗ್ರೆಸ್ ಪಕ್ಷದ ಮಾನಸಿಕತೆ -ಬೌದ್ಧಿಕ ದಿವಾಳಿತನ ಪ್ರತಿನಿಧಿಸುತ್ತದೆ – ರವೀಂದ್ರ ಮೊಯ್ಲಿ

ಕಾರ್ಕಳ : ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿನ ಯುದ್ಧದ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಮಾರುಕಟ್ಟೆಯಲ್ಲಿನ ಪೂರೈಕೆಯಲ್ಲಿ ವ್ಯತ್ಯಯ ಮತ್ತು ವಿತ್ತೀಯ ಕೊರತೆಯಿಂದಾಗಿ ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಸಂಕಷ್ಟಕ್ಕೊಳಗಾಗಬಹುದೆಂಬ ಮುನ್ನೆಚ್ಚರಿಕೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಜನ ಸಾಮಾನ್ಯರಲ್ಲಿ ಪೆಟ್ರೋಲ್, ಡಿಸೇಲ್ ಬಳಕೆಯನ್ನು ಕಡಿಮೆಗೊಳಿಸುವಂತೆ ಹಾಗೂ ಚಿನ್ನದ ಖರೀದಿಯನ್ನು ಮತ್ತು ರಸಗೊಬ್ಬರ ಆಮದು ಮಾಡುವುದನ್ನು ಮುಂದೂಡುವಂತೆ ವಿನಂತಿಸಿಕೊಂಡಿರುವುದನ್ನು ಕಾಂಗ್ರೇಸ್ ಪಕ್ಷ ವಿರೋಧಿಸುತ್ತಿರುವುದು ಅವರ ಮಾನಸಿಕತೆ ಮತ್ತು ಭೌತಿಕ ದಿವಾಳಿತನ ತೋರಿಸುತ್ತದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಹೇಳಿದ್ದಾರೆ.

ಆರ್ಥಿಕ ಹೊರೆ ಕಡಿಮೆಯಾಗುತ್ತದೆ
ಭಾರತ ಸೇರಿ ಹೆಚ್ಚಿನ ಏಷಿಯನ್ ರಾಷ್ಟ್ರಗಳು ತಮ್ಮ ಅಂತರಾಷ್ಟ್ರೀಯ ವಹಿವಾಟುಗಳನ್ನು ಡಾಲರ್ ಮೂಲಕ ಮಾಡುತ್ತಿದ್ದು, ವಾರ್ಷಿಕ ಆಮದು ರಫ್ತುಗಳ ಪ್ರಮಾಣದಲ್ಲಿ ವ್ಯತ್ಯಯವಾದರೇ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಕಳೆದ ವರ್ಷದಲ್ಲಿ ಭಾರತದ ಆಮದು ಮಾಡಿಕೊಂಡ ಸರಕುಗಳಲ್ಲಿ 121.07 ಬಿಲಿಯನ್ ಡಾಲರ್ ಖಚ್ಚಾ ತೈಲಗಳಿಗೆ, 72 ಬಿಲಿಯನ್ ಡಾಲರ್ ಚಿನ್ನ ಖರೀದಿಗೆ, 18.3 ಬಿಲಿಯನ್ ಡಾಲರ್ ಅಡುಗೆ ಎಣ್ಣೆ, 18 ಬಿಲಿಯನ್ ಡಾಲರ್ ರಸ ಗೊಬ್ಬರಗಳಿಗೆ ವಿನಿಯೋಗವಾಗಿದ್ದು, ಇದು ಆಮದಿನ ಒಟ್ಟು ಪ್ರಮಾಣ 30% ಆಗಿರುತ್ತದೆ. ಯುದ್ದದಂತಹ ಸಂದರ್ಭಗಳಲ್ಲಿ ಆಮದು ಮಾಡಿಕೊಳ್ಳುವ ಸರಕುಗಳ ಬೆಲೆಯು ಗಗನಕ್ಕೆರುವುದರಿಂದ ನಮ್ಮ ಬಳಕೆಯ ಪ್ರಮಾಣವನ್ನು ಅಗತ್ಯಕ್ಕೆ ಮಾತ್ರ ಸೀಮಿತಗೊಳಿಸಿದರೆ ಆಮದಿನ ಪ್ರಮಾಣ ಕಡಿಮೆಯಾಗಿ ಭಾರತದ ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.

ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂಧರ್ಭದಲ್ಲಿ ಗೋಧಿಯ ಆಮದಿನ ಮೇಲೆ ನಿರ್ಬಂಧ ಹೇರಿದಾಗ ಆಗಿನ ಪ್ರಧಾನಿ ಲಾಲ್ ಬಹುದ್ದೂ‌ರ್ ಶಾಸ್ತ್ರೀಯವರು ಒಂದು ಹೊತ್ತಿನ ಊಟ ಬಿಡುವಂತೆ ಜನತೆಗೆ ಕರೆ ನೀಡಿದ್ದು, ಅದಕ್ಕೆ ರಾಷ್ಟ್ರ ವ್ಯಾಪಿ ಬೆಂಬಲ ವ್ಯಕ್ತವಾಗಿದನ್ನು ನಾವು ನೆನಪಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಇಂಧನ ಮತ್ತು ಪೆಟ್ರೋಲಿಯಮ್ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಯ್ಲಿಯವರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣಕ್ಕಾಗಿ ರಾತ್ರಿ 8 ಗಂಟೆಗೆ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವಂತೆ ಹಾಗೂ ಪೆಟ್ರೋಲಿಯಮ್ ಉತ್ಪನಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಸಲಹೆ ನೀಡಿರುವುದು ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹಾಗೂ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಕೂಡ ತೈಲೊತ್ಪನ್ನಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಕರೆ ನೀಡಿರುವುದನ್ನು ಕಾಂಗ್ರೆಸ್ ನಾಯಕರುಗಳು ಮರೆತಂತೆ ಕಾಣುತ್ತಿದೆ ಎಂದು ರವೀಂದ್ರ ಮೊಯ್ಲಿ ಹೇಳಿದ್ದಾರೆ.

ನಗೆ ಪಾಟಲಿಗೀಡಾಗಬೇಡಿ
ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಬಗ್ಗೆ ಮಾತನಾಡುವ ಕಾಂಗ್ರೆಸಿಗರು ಅವರ ನಾಯಕರಂತೆ ಪ್ರಧಾನಿಯವರು ಮೋಜು ಮಸ್ತಿಗಾಗಿ ವಿದೇಶ ಪ್ರವಾಸ ಮಾಡುತ್ತಿಲ್ಲ. ವಿಪಕ್ಷೀಯ ವ್ಯಾಪಾರ ವೃದ್ಧಿ ರಾಜತಾಂತ್ರಿಕ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿದ್ದು, ದೇಶದ ಸಂಕಷ್ಟದ ಸಮಯದಲ್ಲಿ ದೇಶಕ್ಕಾಗಿ ದೇಶದೊಂದಿಗೆ ಇರಬೇಕೆ ಹೊರತು ಈಗಾಗಲೇ ಜನರಿಂದ ಅವಕೃಪೆಗೊಳಗಾಗಿರುವ ನೀವುಗಳು ಮತ್ತೆ ರಾಜಕೀಯ ತೆವಳಿಗಾಗಿ ಬೇಜವಬ್ದಾರಿತನದ ಹೇಳಿಕೆ ನೀಡಿ ನಗೆ ಪಾಟಲಿಗೀಡಾಗಬೇಡಿ ಎಂದು ರವೀಂದ್ರ ಮೊಯ್ಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.





























































































error: Content is protected !!
Scroll to Top