ಮಂಗಳೂರು : ನೇಸರ ದಶಪ್ರಣತಿ ಸಮಿತಿ–2026, ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲ ಮುಕ್ಕೂರು ಆಶ್ರಯದಲ್ಲಿ ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ‘ಅಮ್ಮನಿಗೊಂದು ಮಗಳ ಪತ್ರ’ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಸಾರ್ವಜನಿಕ ಹಾಗೂ ವಿದ್ಯಾರ್ಥಿ ವಿಭಾಗಗಳಲ್ಲಿ ಒಟ್ಟು 200ಕ್ಕೂ ಅಧಿಕ ಪತ್ರಗಳು ಸ್ಪರ್ಧೆಗೆ ಬಂದಿದ್ದು, ಸಾಹಿತ್ಯದ ಗುಣಮಟ್ಟ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ಭಾಷಾ ಸೊಗಡಿನ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧೆಗೆ ಲೇಖಕಿ ಅಶ್ವಿನಿ ಕೋಡಿಬೈಲು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ಸಾರ್ವಜನಿಕ ವಿಭಾಗದಲ್ಲಿ ಸುಳ್ಯದ ಸಾವಿತ್ರಿ ಬಿ. ಪ್ರಥಮ ಬಹುಮಾನ ಹಾಗೂ ಉಡುಪಿಯ ಅಜ್ಜರಕಾಡಿನ ವಿನುತಾ ನಿತೇಶ್ ದ್ವಿತೀಯ ಬಹುಮಾನ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನ ಮಂಚಿಯ ತುಳಸಿ ಕೈರಂಗಳ (ಭಾರತಿ) ಹಾಗೂ ಕಡಬ ತಾಲೂಕಿನ ಬೀದಿಗುಡ್ಡದ ದಿವ್ಯಾ ಗುಣಪಾಲ ಸಂಪ್ಯಾಡಿ ಅವರ ಪತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ.
ವಿದ್ಯಾರ್ಥಿ ವಿಭಾಗದಲ್ಲಿ ಸುಳ್ಯದ ದನ್ಯ ಅಡ್ಡನಪಾರೆ ಪ್ರಥಮ ಹಾಗೂ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಎಳ್ಳುಮಜಲಿನ ಧನ್ಯಶ್ರೀ ಎ. ದ್ವಿತೀಯ ಬಹುಮಾನ ಪಡೆದಿದ್ದಾರೆ. ಸುಳ್ಯದ ಮಂಡೆಕೋಲಿನ ಉಗ್ರಾಣಿಮನೆಯ ಸುಶ್ಮಿತಾ ಯು.ಯಂ. ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯದ ಅನನ್ಯ ಎಚ್. ಅವರ ಪತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ.
ನೇಸರ ಅಂತರ್ ಜಿಲ್ಲಾ ಮಟ್ಟದ ‘ಅಮ್ಮನಿಗೊಂದು ಮಗಳ ಪತ್ರ’ ಸ್ಪರ್ಧಾ ವಿಜೇತರು
















