ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ – ವಾಟ್ಸಾಪ್‌ನಲ್ಲಿ ಮಾತುಕತೆ

ಕಾರ್ಕಳ : ಯುವತಿಯ ಮೇಲೆ ಯುವಕನೋರ್ವ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸಬಾ ಗ್ರಾಮದ ಕಾವೇರಡ್ಕದ 19 ವರ್ಷದ ಯುವತಿಯೋರ್ವಳಿಗೆ ಇನ್ಸ್ಟಾಗ್ರಾಮ್‌ ಮೂಲಕ ಬಜಗೋಳಿಯ ಯುವಕ ಪರಿಚಯವಾಗಿದ್ದು, ಇವರಿಬ್ಬರೂ ವಾಟ್ಸಾಪ್‌ನಲ್ಲಿ ಮಾತನಾಡುತ್ತಿದ್ದರು. ಜು. 15ರಂದು ಯುವ ಯುವತಿಗೆ ಕರೆ ಮಾಡಿ ಕಸಬಾ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಮೆಡಿಕಲ್‌ಗೆ ಬರುವಂತೆ ತಿಳಿಸಿದ್ದಾನೆ. ಬಸ್ ನಿಲ್ದಾಣಕ್ಕೆ ಬಂದಾಗ ಯುವಕ ಅಲ್ಲಿಂದ ಬಾರ್‌ಗೆ ಊಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತ ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾನೆ. ಅಲ್ಲದೆ ʼನಿನ್ನ ವೀಡಿಯೋ ನನ್ನಲ್ಲಿದೆ, ಅದನ್ನು ಜಾಲತಾಣದಲ್ಲಿ ಹರಿಬಿಡುತ್ತೇನೆ, ನಾನು ವಿದೇಶಕ್ಕೆ ಹೋಗುವ ಮೊದಲು ನಿನ್ನನ್ನು ಬಿಡುವುದಿಲ್ಲʼ ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಅವರಿಬ್ಬರು ಬಾರ್‌ನಲ್ಲಿ ಕೇವಲ ಊಟ ಮಾಡಿ ಜಗಳವಾಡಿದ್ದರೋ ಅಥವಾ ಮದ್ಯಪಾನ ಸೇವಿಸಿ ಜಗಳವಾಗಿದೆಯೋ ಎಂಬ ವಿಚಾರ ತನಿಖೆಯಲ್ಲಿ ತಿಳಿದು ಬರಬೇಕಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮ ವೈಫಲ್ಯ ವಿಚಾರವಾಗಿ ಹದಿಹರೆಯದ ವಯಸ್ಸಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.





























































































































error: Content is protected !!
Scroll to Top