ಅಧ್ಯಕ್ಷರಾಗಿ ದಿಲೀಪ್ ಶೆಟ್ಟಿ – ಕಾರ್ಯದರ್ಶಿಯಾಗಿ ಧೀರಜ್ ಹೆಗ್ಡೆ
ಕಾರ್ಕಳ : ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಗಾಂಧಿ ಸ್ಮಾರಕ ಭವನ ನೀರೆ ಬೈಲೂರು ಇದರ 47ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿಲೀಪ್ ಶೆಟ್ಟಿ ಕೆಳಪೇಟೆ ಪುನರಾಯ್ಕೆಯಾಗಿದ್ದಾರೆ.
ಜು. 18ರಂದು ಬೈಲೂರು ಶ್ರೀ ಮಾರಿಯಮ್ಮ ಸಭಾಭವನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯದರ್ಶಿಯಾಗಿ ಧೀರಜ್ ಹೆಗ್ಡೆ, ಕೋಶಾಧಿಕಾರಿಯಾಗಿ ಹರೀಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಕಿಶನ್ ಕೌಡೂರು ಹಾಗೂ ಸುನಿಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತಿಲಕ್ ಹಾಗೂ ವಿಶ್ವಾಸ್ ಕೌಡೂರು ಅವರನ್ನು ಪುನರಾಯ್ಕೆ ಮಾಡಲಾಯಿತು.














