ಕಥೋಲಿಕ್ ಸಭಾ – ಪ್ರತಿಭಾ ಪುರಸ್ಕಾರ

ಕಾರ್ಕಳ : ಕಾರ್ಕಳ ವಲಯ ಕಥೊಲಿಕ್ ಸಭಾದ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು. 19ರಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಸಭಾ ಭವನದಲ್ಲಿ ವಲಯ ಅಧ್ಯಕ್ಷ ಅಂತೋನಿ ಮಿರಾಂದ ಅವರ ಮುಂದಾಳತ್ವದಲ್ಲಿ ನಡೆಯಿತು. ಕಥೋಲಿಕ್ ಸಭಾ ವಲಯ ನಿರ್ದೇಶಕ ಹಾಗೂ ಸಂತ ಲಾರೆನ್ಸ್ ಬಸಿಲಿಕಾದ ರೆ. ವಂ. ಅಲ್ಬನ್ ಡಿಸೋಜ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವಲಯ ಮಟ್ಟದಲ್ಲಿ ಸ್ಟೇಟ್ ಬೋರ್ಡ್, ಸಿ.ಬಿ.ಎಸ್.ಸಿ ಮತ್ತು ಐ.ಸಿ.ಎಸ್‌.ಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಹತ್ತನೇ ತರಗತಿಯ 11 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 6 ವಿದ್ಯಾರ್ಥಿಗಳು ಮತ್ತು ಸಿ.ಎ, ಪಿ.ಎಚ್.ಡಿ, ಎಂ.ಬಿ.ಬಿ.ಎಸ್ ಮತ್ತು ಡಿ ಫಾರ್ಮ ವಿಭಾಗದಲ್ಲಿ ಸಾಧನೆ ಮಾಡಿದ ಐವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಹಿರ್ಗಾನ ಘಟಕದ ಲೀಶಾ ಬರ್ಬೊಜ ಮಾತನಾಡಿ, ಇಂತಹ ಪುರಸ್ಕಾರಗಳು ನಮಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ವಲಯ ನಿರ್ದೇಶಕರು ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಸಂಚಾಲಕ ನೆಲ್ಸನ್ ಮಚಾದೊ ಕಣಜಾರ್ ಮತ್ತು ಒಫಿಲಿಯಾ ಡಿಸೋಜ ಪರಪ್ಪಾಡಿ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮಮತಾ ಬರ್ಬೊಜ ಕಣಜಾರು ಕಾರ್ಯಕ್ರಮ ನಿರೂಪಿಸಿದರು. ವಲಯ ಮಟ್ಟದ ಕಾರ್ಯದರ್ಶಿ ಸೋನು ಸಿಕ್ವೇರಾ ಮಿಯ್ಯಾರು ವಂದಿಸಿದರು.





























error: Content is protected !!
Scroll to Top