ಕಾರ್ಕಳ : ಕುಂಟಲ್ಪಾಡಿ ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಸಮೀಪ ಅವೈಜ್ಞಾನಿಕವಾಗಿ ಲೇ ಔಟ್ ಹಾಗೂ ರಸ್ತೆಯಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಭಕ್ತಾದಿಗಳಿಂದ ಜೂ. 4 ರಂದು ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯ ಬೇಡಿಕೆಯಂತೆ, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಮತ್ತು ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿದ ಅವರು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಇದನ್ನೂ ಓದಿ : ಅಂಬಾಭವಾನಿ ದೇವಸ್ಥಾನದ ಆಸುಪಾಸಿನಲ್ಲಿ ಲೇಔಟ್, ಕಾಂಪೌಂಡ್ ನಿರ್ಮಾಣ ವಿರೋಧಿಸಿ ಭಕ್ತಾಧಿಗಳಿಂದ ಪ್ರತಿಭಟನೆ
ಈ ಸಂದರ್ಭ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ರಾಜೇಶ್ ಕೋಟ್ಯಾನ್, ಅವಿನಾಶ್ ಶೆಟ್ಟಿ, ಪುರಸಭಾ ಮಾಜಿ ಸದಸ್ಯರಾದ ಮೀನಾಕ್ಷಿ ಗಂಗಾಧರ್, ಸುನಿಲ್ ಕೋಟ್ಯಾನ್, ಪ್ರಕಾಶ್ ರಾವ್, ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಅಮರ್ ಶೆಟ್ಟಿಗಾರ್ ಹಾಗೂ ಸದಸ್ಯರಾದ ಶೈಲೇಶ್, ಸಾತ್ವಿಕ್, ಅಕ್ಷಯ ಕಾಮತ್, ನೇತ್ರಾ, ಶಾಂತಾ, ಪ್ರತಿಭಾ ಮತ್ತು ಇತರರು ಸ್ಥಳದಲ್ಲಿದ್ದರು.
ಶ್ರೀ ಅಂಬಾಭವಾನಿ ದೇವಸ್ಥಾನದ ಆಸುಪಾಸಿನಲ್ಲಿ ಲೇಔಟ್, ಕಾಂಪೌಂಡ್ ನಿರ್ಮಾಣ ಆರೋಪ : ತಹಶೀಲ್ದಾರ್ – ಮುಖ್ಯಾಧಿಕಾರಿಯಿಂದ ಸ್ಥಳ ಪರಿಶೀಲನೆ
























