ಸುಧೀರ್‌ ಬಂಗೇರ ವಿರುದ್ಧ ಜಾತಿ ನಿಂದನೆ ಕೇಸ್ ಖಂಡನೀಯ

ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಸರಕಾರದ ಗೃಹ ಮಂತ್ರಿಗಳಿಗೆ ಜಾತಿನಿಂದನೆ ಮಾಡಿರುವುದಾಗಿ ಕೆರ್ವಾಶೆ ನಿವಾಸಿ ಸುಧೀರ್ ಕುಲಾಲ್ ಎಂಬವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಸುಧೀರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಅಂತಹ ವೈಯಕ್ತಿಕ ಜಾತಿ ನಿಂದನೆಯಾಗಲಿ, ಜೀವ ಬೆದರಿಕೆಯಾಗಲಿ ಮಾಡಿರುವುದು ಕಂಡು ಬಂದಿರುವುದಿಲ್ಲ. ಆದರೂ ಕೂಡ ಕಾರ್ಕಳ ಸ್ಥಳೀಯ ಕಾಂಗ್ರೆಸ್ಸಿನವರ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ ಎಂದು ಆರೋಪಿಸಿರುವ ಕುಲಾಲ ಸಮಾಜದ ಪ್ರಮುಖರು ಸುಧೀರ್ ಕುಲಾಲ್ ಅವರಿಗೆ ನ್ಯಾಯ ಒದಗಿಸುವಂತೆ ಕಾರ್ಕಳ ಉಪಪೊಲೀಸ್‌ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಸುಧೀರ್ ಕುಲಾಲ್ ಅವರು ಯಾವುದೇ ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಲ್ಲ. ಯಾವುದೇ ರಾಜಕೀಯ ಗಲಾಟೆಗಳಲ್ಲಿ ಈವರೆಗೆ ಭಾಗಿಯಾಗಲಿಲ್ಲ. ಇವರ ವಿರುದ್ಧ ದಾಖಲಾದ ಪ್ರಕರಣ ಅತ್ಯಂತ ಗಂಭೀರ ಅಲ್ಲದಿದ್ದರೂ ಅಲ್ಲದೆ ಅದನ್ನು ಪೊಲೀಸ್ ಠಾಣೆಯಲ್ಲಿ ಇತ್ಯರ್ಥ ಪಡಿಸಲು ಅವಕಾಶವಿದ್ದರೂ ಕೂಡ ಅವರನ್ನು ಜೈಲಿಗೆ ಕಳುಹಿಸಲೇಬೇಕು ಎಂಬ ಉದ್ದೇಶದಿಂದ ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿರುವುದರಿಂದ ಅವರನ್ನು ನಂಬಿಕೊಂಡಿರುವ ಅವರ ಕುಟುಂಬಕ್ಕೆ ಸಮಾಜದಲ್ಲಿ ಅವಮಾನವಾಗಿರುವುದಷ್ಟೇ ಅಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭ ಸುರೇಂದ್ರ ಕುಲಾಲ್‌ ವರಂಗ, ದಿವಾಕರ ಬಂಗೇರ ಅತ್ತೂರು, ಗೋಪಾಲ ಮೂಲ್ಯ, ಚಂದ್ರಶೇಖರ್‌ ಮೂಲ್ಯ, ವಸಂತ ಕುಲಾಲ್‌, ಪ್ರಭಾಕರ್‌ ಕುಲಾಲ್‌, ಕಿರಣ್‌ ಕುಲಾಲ್‌, ರಾಘವೇಂದ್ರ ಕುಲಾಲ್‌ ಉಪಸ್ಥಿತರಿದ್ದರು.

































































































error: Content is protected !!
Scroll to Top