ಕಾರ್ಕಳ : ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ. ಆರ್. ಅವರು ವರ್ಗಾವಣೆಗೊಂಡಿದ್ದು, ನೂತನ ವೃತ್ತ ನಿರೀಕ್ಷಕರಾಗಿ ಸಂದೀಪ್ ಜಿ. ಎಸ್. ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಇವರು 2007ರಲ್ಲಿ ಪಿಎಸ್‌ಐ ಆಗಿ ನೇಮಕಗೊಂಡಿದ್ದು, ಹುಬ್ಬಳ್ಳಿಯಲ್ಲಿ ತಮ್ಮ ಕರ್ತವ್ಯ ಪ್ರಾರಂಭಿಸಿದ್ದರು. ಆ ಬಳಿಕ ಶಿವಮೊಗ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಪಿಎಸ್‌ಐ ಕರ್ತವ್ಯ ಸಲ್ಲಿಸಿ 2019ರಲ್ಲಿ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿ ಕರಾವಳಿ ಕಾವಲು ಪಡೆಯಲ್ಲಿ, ಉಳ್ಳಾಲ ಪೊಲೀಸ್ ಠಾಣೆ ಮತ್ತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕಾರ್ಕಳ ವೃತ್ತ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮಂಜಪ್ಪ ಅವರು ಮಂಗಳೂರು ಗ್ರಾಮಾಂತರ ಪೊಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಮಂಜಪ್ಪ ಡಿ. ಆರ್. ವರ್ಗಾವಣೆ – ನೂತನ ವೃತ್ತ ನಿರೀಕ್ಷಕರಾಗಿ ಸಂದೀಪ್ ಜಿ. ಎಸ್.
























