ಬೈಲೂರು ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ – ಸುತ್ತು ನಿಧಿ ಚೆಕ್ ವಿತರಣೆ

ಕಾರ್ಕಳ : ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬಿ ಜೀವನಕ್ಕೆ ಸಂಜೀವಿನಿ ಒಕ್ಕೂಟಗಳು ದಾರಿದೀಪವಾಗಿವೆ ಎಂದು ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷೆ ಚೇತನಾ ಅಭಿಪ್ರಾಯಪಟ್ಟರು.
ಅವರು ಜೂ. 6ರಂದು ಒಕ್ಕೂಟದ ಸಭಾಂಗಣದಲ್ಲಿ ನಡೆದ ಒಕ್ಕೂಟದ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುತ್ತು ನಿಧಿ ವಿತರಣೆ ಮತ್ತು ಬ್ಯಾಂಕಿಂಗ್ ನೆರವು
ಸರ್ಕಾರದ ವತಿಯಿಂದ ಒಕ್ಕೂಟಕ್ಕೆ ಬಿಡುಗಡೆಯಾದ ಸುತ್ತು ನಿಧಿ ಮೊತ್ತದ ಚೆಕ್‌ಗಳನ್ನು ಸ್ವಸಹಾಯ ಸಂಘಗಳ ಸದಸ್ಯರಿಗೆ ವಿತರಿಸಲಾಯಿತು.
ಕೆನರಾ ಬ್ಯಾಂಕ್‌ನ ಸಮಾಲೋಚಕ ಪ್ರದೀಪ್ ಮಾತನಾಡಿ, ಮಹಿಳೆಯರು ಬ್ಯಾಂಕಿಂಗ್ ಸೌಲಭ್ಯಗಳನ್ನು ಮತ್ತು ಕಿರು ಸಾಲಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಹೇಗೆ ಮುನ್ನಡೆಯಬೇಕು ಎಂಬ ಕುರಿತು ಮಾರ್ಗದರ್ಶನ ನೀಡಿದರು.

ವಿವಿಧ ಇಲಾಖೆಗಳ ಸಮನ್ವಯತೆ
ಗ್ರಾಮೀಣಾಭಿವೃದ್ಧಿಯಲ್ಲಿ ಸಂಜೀವಿನಿ ಯೋಜನೆಯ ಮಹತ್ವದ ಕುರಿತು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ (TPM) ಉಮಾ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ನಾಗರಾಜ್ ಅವರು ಮಾತನಾಡಿದರು. ಕೃಷಿ ಇಲಾಖೆಯ ರಮೇಶ್ ಉಳ್ಳಗಡ್ಡಿ ಅವರು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ, ಆರೋಗ್ಯ ಇಲಾಖೆಯ ಸಿ.ಎಚ್.ಓ (CHO) ರಶ್ಮಿ ಹಾಗೂ ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಗ್ರಾಮೀಣ ಮಹಿಳೆಯರ ಆರೋಗ್ಯ ರಕ್ಷಣೆ ಮತ್ತು ಕಣ್ಣಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್‌ನ ಮಾಜಿ ಅಧ್ಯಕ್ಷ ಸುಜಾತಾ, ಶ್ರೀ ವಿನಾಯಕ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಸ್ವಸಹಾಯ ಸಂಘಗಳ (SHG) ಪ್ರತಿನಿಧಿಗಳು ಉಪಸ್ಥಿತರಿದ್ದರರು.















































































































































error: Content is protected !!
Scroll to Top