ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ: ಆಳ್ವಾಸ್‌ಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಮತ್ತು ಮಂಗಳೂರಿನ ಬದ್ರಿಯಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ 5 ಚಿನ್ನ ಪದಕದೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ 5 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು ಸೇರಿ ಒಟ್ಟು 7 ಪದಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಆಳ್ವಾಸ್ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು.

ಆ ಮೂಲಕ ಎರಡು ವಿಭಾಗದಲ್ಲಿ ಅವಳಿ ಸಮಗ್ರ ಪ್ರಶಸ್ತಿ ಲಭಿಸಿತು.

ಬಾಲಕರ ವಿಭಾಗದಲ್ಲಿ : 60 ಕೆಜಿ – ಸಂತೋಷ್ (ಪ್ರಥಮ), 71 ಕೆಜಿ – ಪ್ರಫುಲ್ (ಪ್ರಥಮ), 79 ಕೆಜಿ – ಪ್ರಜ್ವಲ್ (ಪ್ರಥಮ), 88 ಕೆಜಿ – ಶ್ರೇಯಸ್ (ಪ್ರಥಮ), 110 ಕೆಜಿ – ಜೇಷ್ಠ (ಪ್ರಥಮ)

ಬಾಲಕಿಯರ ವಿಭಾಗದಲ್ಲಿ : 48 ಕೆಜಿ – ಸಂಜನಾ (ಪ್ರಥಮ), 53 ಕೆಜಿ – ಸೌಮ್ಯ (ಪ್ರಥಮ), 58 ಕೆಜಿ – ಮೈತ್ರಿ (ಪ್ರಥಮ), 63 ಕೆಜಿ – ಅಪೂರ್ವ (ಪ್ರಥಮ), 69 ಕೆಜಿ – ಲಹರಿ (ದ್ವಿತೀಯ), 77 ಕೆಜಿ – ಪಾವನಿ (ಪ್ರಥಮ), 86 ಕೆಜಿ – ಅಶ್ವಿನಿ (ಪ್ರಥಮ), +86 ಕೆಜಿ – ಸಾಧನ (ತೃತೀಯ), ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.















































































































































error: Content is protected !!
Scroll to Top