ಮೂಡುಶೆಡ್ಡೆಯ ಮಕ್ಕಳ ಆಹಾರ ತಯಾರಿಕಾ ಘಟಕಕ್ಕೆ ಅಧಿಕಾರಿಗಳ ಭೇಟಿ

ಆಹಾರ ವಸ್ತುಗಳ ಮಾದರಿ ಸಂಗ್ರಹಣೆ, ಲ್ಯಾಬ್‌ಗೆ ರವಾವೆ

ಮಂಗಳೂರು: ರಾಜ್ಯದ ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಗುಣಮಟ್ಟ, ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವ ರು.ಟಿ. ಖಾದರ್ ಆಗ್ರಹಿಸಿದ್ದು, ಅದರ ಬೆನ್ನಲ್ಲೇ ಮೂಡುಶೆಡ್ಡೆಯಲ್ಲಿರುವ ಅಂಗನವಾಡಿ ಮಕ್ಕಳ ಆಹಾರ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ದ.ಕ. ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಪರಿಶೀಲನೆ ನಡೆಸಿದ್ದಾರೆ.

ಹಾಗೆಯೇ ಕೇಂದ್ರದಲ್ಲಿ ಸಿದ್ಧಪಡಿಸಲಾಗುವ ವಿವಿಧ ಆಹಾರ ವಸ್ತುಗಳ ಮಾದರಿಗಳನ್ನು ಪಡೆದುಕೊಂಡು ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಗುಣಮಟ್ಟ, ಸುರಕ್ಷತೆಗೆ ಪೂರಕವಾಗಿ ಮಕ್ಕಳಿಗೆ ನೀಡುವ ಆಹಾರವನ್ನು ತಯಾರಿಸಲಾಗುತ್ತಿದೆಯೇ? ಎಂಬುದು ಪರೀಕ್ಷಾ ರಿಪೋರ್ಟ್‌ನಿಂದ ತಿಳಿದು ಬರಲಿದೆ.

ಹಾಗೆಯೇ ಸಿದ್ಧ ರಚಿಸಲಾದ ಆಹಾರ ವಸ್ತುಗಳನ್ನು ಯಂತ್ರಗಳ ಮೂಲಕವೇ ಪ್ಯಾಕಿಂಗ್ ಮಾಡುವಂತೆ ಸೂಚಿಸಲಾಗಿದೆ. ಆಹಾರ ಪೊಟ್ಟಣಗಳ ಮೇಲೆ ಫುಡ್ ಗ್ರೇಡ್ ಮತ್ತು ಲೇಬಲಿಂಗ್ ಸಹ ಕಡ್ಡಾಯ ಎಂದು ಸೂಚಿಸಲಾಗಿದೆ. ತಯಾರಿಕೆ ದಿನಾಂಕ, ಅವಧಿ ಮುಕ್ತಾಯ ದಿನಾಂಕವನ್ನು ಸಹ ಕಡ್ಡಾಯವಾಗಿ ನಮೂದಿಸಲು ಸೂಚಿಸಲಾಗಿದೆ.















































































































































error: Content is protected !!
Scroll to Top