ಪಾಕ್ ತಯಾರಿಕ ಸೌಂದರ್ಯವರ್ಧಕಗಳಲ್ಲಿ ‌ಹೆವಿ ಮೆಟಲ್ ಕಂಟೆಂಟ್: ಬಳಸದಂತೆ ಸಾರ್ವಜನಿಕರಿಗೆ ಸೂಚನೆ

ನವದೆಹಲಿ: ಹೆವಿ ಮೆಟಲ್ ಕಂಟೆಂಟ್ ಹೊಂದಿರುವ ಪಾಕಿಸ್ತಾನ ತಯಾರಿಸುತ್ತಿರಿವ ಎರಡು ಫೇಸ್ ಕ್ರೀಮ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿರುವುದು ‌ಕಂಡು ಬಂದಿದ್ದು, ಅದರ ವಿರುದ್ಧ ಭಾರತೀಯ ಔಷಧ ನಿಯಂತ್ರಕ ಸಂಸ್ಥೆಯು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಎಚ್ಚರಿಕೆ ನೀಡಿದೆ.

ಗೋರಿ ಬ್ಯೂಟಿ ಕ್ರೀಂ ಮತ್ತು ಚಾಂದನಿ ವೈಟ್ನಿಂಗ್ ಕ್ರೀಂ ಎಂಬ ಎರಡು ಪಾಕ್ ಮೂಲದ ಸೌಂದರ್ಯವರ್ಧಕಗಳು ಹೆಚ್ಚು ಮೆಟಲ್ ಕಂಟೆಂಟ್ ಹೊಂದಿವೆ. ಇವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇವುಗಳನ್ನು ಖರೀದಿಸದಂತೆ, ಬಳಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಈ ಎರಡು ಸೌಂದರ್ಯವರ್ಧಕಗಳ ಫೋಟೋ ಹಂಚಿಕೊಂಡಿದ್ದು, ಇವು ಅನಧಿಕೃತವಾಗಿದೆ ಎಂದು ಹೇಳಿದೆ. ಭಾರತದಲ್ಲಿ ಇವುಗಳ ಮಾರಾಟಕ್ಕೆ ಅನುಮತಿ ಇಲ್ಲ. ಅದರ ಮಾರಾಟ ಕಂಡುಬಂದಲ್ಲಿ ಸಂಬಂಧಪಟ್ಟ ರಾಜ್ಯ ಡ್ರಗ್ಸ್ ಕಂಟ್ರೋಲರ್‌ಗೆ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ. ಜೊತೆಗೆ ಆಮದು ಮಾಡಲಾದ ಸೌಂದರ್ಯವರ್ಧಕಗಳ ಬಗ್ಗೆ DCGI ಗೆ ಮಾಹಿತಿ ನೀಡುವಂತೆ ಗ್ರಾಹಕರಿಗೆ ತಿಳಿಸಿದೆ.































































































































































error: Content is protected !!
Scroll to Top