ಸೆ:18 ಸಿಎಂ ಹೆಬ್ರಿ ಭೇಟಿ ಹಿನ್ನಲೆ ಮುದ್ರಾಡಿ ಮಂಜುನಾಥ ಪೂಜಾರಿ ಅವರಿಂದ ಪತ್ರಿಕಾಗೋಷ್ಠಿ

ಕಸ್ತೂರಿ ರಂಗನ್ ವರದಿಯ ಆತಂಕ, ಗೊಂದಲಗಳನ್ನು ಒಗ್ಗಟ್ಟಾಗಿ ಸಿಎಂ ಮುಂದಿರಿಸಲು ಜನರಿಗೆ ಕರೆ

ಕಾರ್ಕಳ: ಸಿಎಂ ಡಿ.ಕೆ. ಶಿವಕುಮಾರ್ ಅವರು ಸೆ. 18 ರಂದು ಹೆಬ್ರಿಗೆ ಆಗಮಿಸಲಿದ್ದು, ಈ ಹಿನ್ನೆಲೆ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ (ನಿ.) ಯ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳು ಹೆಬ್ರಿಗೆ ಆಗಮಿಸಿ ಕಸ್ತೂರಿ ರಂಗನ್ ‌ವರದಿಗೆ ಸಂಬಂಧಿಸಿದ ಹಾಗೆ ಈ ಭಾಗದ ಜನರಲ್ಲಿರುವ ಸಾಕಷ್ಟು ಗೊಂದಲ, ಆತಂಕಗಳನ್ನು ಆಲಿಸಲಿದ್ದಾರೆ. ಆ ಬಳಿಕ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಸ್ಪಷ್ಟ ಸಂದೇಶವನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಹೆಬ್ರಿಯಲ್ಲಿ ‌ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಕಾರ್ಕಳ ಮಾತ್ರವಲ್ಲದೆ ಕುಂದಾಪುರ, ತೀರ್ಥಹಳ್ಳಿ, ಮಂಗಳೂರಿನ ಜನರು ಸಹ ಭಾಗವಹಿಸುವ ನಿರೀಕ್ಷೆ ಇದೆ. ಹೆಬ್ರಿ ಸುತ್ತಮುತ್ತಲಿನ ಜನರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಂಜುನಾಥ್ ಅವರು ವಿನಂತಿಸಿದ್ದಾರೆ. ಆ ಭಾಗದ ಜನರ ಧ್ವನಿಯನ್ನು ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ಎದುರು ಇರಿಸೋಣ ಎಂದು ಅವರು ಮನವಿ ಮಾಡಿದ್ದಾರೆ.

ಇನ್ನು ಮುಖ್ಯಮಂತ್ರಿ ಹೆಬ್ರಿ ಭೇಟಿಗೆ ಸಂಬಂಧಿಸಿದ ಎಲ್ಲಾ ರೀತಿಯ ವ್ಯವಸ್ಥೆಗಳು ನಡೆಯುತ್ತಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಹೆಬ್ರಿಯ ಮುಂದಾಳು ಭಾಸ್ಕರ ಜೋಯಿಸ್‌, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್‌ ಕೆ ಅಡ್ಯಂತಾಯ, ಪ್ರಮುಖರಾದ ಶಂಕರ ಶೇರಿಗಾರ್‌, ಹರೀಶ ಶೆಟ್ಟಿ ನಾಡ್ಪಾಲು, ಭೋಜ ಕುಲಾಲ್‌ ಬೇಳಂಜೆ, ಹರೀಶ ಪೂಜಾರಿ ಬೇಳಂಜೆ, ಗಫೂರ್‌ ಅಜೆಕಾರು ಮುಂತಾದವರು ಹಾಜರಿದ್ದರು.































































































































































error: Content is protected !!
Scroll to Top