ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಈ ಶೈಕ್ಷಣಿಕ ವರ್ಷದಿಂದ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಎರಡು ವಿಶಿಷ್ಟ ಸ್ನಾತಕೋತ್ತರ ಕೋರ್ಸ್ ಗಳನ್ನು ಪ್ರಾರಂಭಿಸಲಿದೆ. MA in ecosophical aesthestics ಮತ್ತು MA in art and peace studies ಎಂಬುದೇ ಈ ಹೊಸ ಕೋರ್ಸ್ ಗಳು. MA in ecosophical aesthestics ಇದು ಸಮಕಾಲೀನ ಪರಿಸರ ಬಿಕ್ಕಟ್ಟಿಗೆ ಸಂಬಂಧಪಟ್ಟಿರುವ ಕೋರ್ಸ್. MA in art and peace studies ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಸಂಬಂಧಿಸಿದೆ. ಎರಡೂ ಕೋರ್ಸ್ ಗಳು ತಲಾ ನಾಲ್ಕು ಸೆಮಿಸ್ಟರ್ ಗಳನ್ನು ಹೊಂದಿವೆ. ಆರ್ಟ್ ಜರ್ನಲಿಸಂನಲ್ಲಿ ಆಸಕ್ತಿ ಇರುವ ಪದವೀಧರ ವಿದ್ಯಾರ್ಥಿಗಳು ಸೇರಬಹುದು.