ಅಮೆರಿಕ – ಇರಾನ್ ನಡುವಣ 107 ದಿನಗಳ ಯುದ್ಧ ಅಂತ್ಯ

ಹಾರ್ಮುಜ್ ರೀ ಓಪನ್ : ಜೂ. 19ರಂದು ಸಹಿ – ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್ : ಅಮೆರಿಕ-ಇರಾನ್ ಯುದ್ಧ ಕೊನೆಗೂ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಸಂಬಂಧ ಜೂ. 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಔಪಚಾರಿಕ ಸಹಿ ಹಾಕಲು ನಿರ್ಧರಿಸಲಾಗಿದೆ ಎಂದು ತಿಳಸಿದ್ದಾರೆ. ಹೀಗಾಗಿ 3 ತಿಂಗಳಿಗೂ ಅಧಿಕ ಕಾಲದ ಯುದ್ಧ ಕೊನೆಗೊಳ್ಳಲಿದೆ.

ಹಾರ್ಮುಜ್‌ ಮುಕ್ತ
ಹಾರ್ಮುಜ್ ಜಲಸಂಧಿಯ ನೌಕಾ ದಿಗ್ಬಂಧನವನ್ನು ತಕ್ಷಣವೇ ತೆರವುಗೊಳಿಸಲಾಗುತ್ತಿದೆ. ಜೂ 19ರಂದು ಉಭಯ ದೇಶಗಳು ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ವಿಚಾರವನ್ನು ಇರಾನ್‌ ಸಹ ಖಚಿತಪಡಿಸಿದ್ದು, ಅಮೆರಿಕಾ-ಇಸ್ರೇಲ್‌ ವಿರುದ್ದ ಸ್ಪಷ್ಟ ವಿಜಯ ಸಾಧಿಸಿದೆ ಎಂದಿದೆ.

ಯುದ್ಧ ಅಂತ್ಯ
ಹಾರ್ಮುಜ್ ಜಲಸಂಧಿಯನ್ನು ಟೋಲ್-ಫ್ರೀ ಆಗಿ ತೆರೆಯಲು ಸಂಪೂರ್ಣವಾಗಿ ಅಧಿಕಾರ ನೀಡುತ್ತೇನೆ. ಇದೇ ವೇಳೆ ಯುನೈಟೆಡ್ ಸ್ಟೇಟ್ಸ್ ನೌಕಾ ದಿಗ್ಬಂಧನವನ್ನು ತಕ್ಷಣ ತೆಗೆದುಹಾಕಲು ಅಧಿಕಾರ ನೀಡುತ್ತೇನೆ. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಪ್ರಾರಂಭಿಸಿ. ತೈಲ ಹರಿಯಲು ಬಿಡಿ ಎಂದು ಟ್ರಂಪ್‌ ತಿಳಿಸಿದ್ದಾರೆ.

ಟ್ರಂಪ್ ಅವರ 80ನೇ ಹುಟ್ಟುಹಬ್ಬದಂದು ಈ ಘೋಷಣೆ ಮಾಡಿದ್ದು, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಒಂದು ವಾರದ ತೀವ್ರ ರಾಜತಾಂತ್ರಿಕ ಮಾತುಕತೆ ಬಳಿಕ ಈ ಬೆಳವಣಿಗೆ ಕಂಡಿದೆ. ಈ ಒಪ್ಪಂದವನ್ನು ಮಹಾನ್ ಸಾಧನೆ ಎಂದು ಟ್ರಂಪ್ ಹೇಳಿದ್ದು, ಇದರಿಂದ ಮಧ್ಯ ಪ್ರಾಚ್ಯದಲ್ಲಿ ಪರಿಸ್ಥಿತಿ ಶಾಂತಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.































































































































































error: Content is protected !!
Scroll to Top