ಬಾವಿಗೆ ಬಿದ್ದ ಬೆಕ್ಕು – ರಕ್ಷಣೆಗೆ ಧಾವಿಸಿದ ವ್ಯಕ್ತಿಯೂ ಬಾವಿಗೆ

ಕಾರ್ಕಳ : ಬೆಕ್ಕು ಬಾವಿಗೆ ಬಿತ್ತೆಂದು ರಕ್ಷಣೆಗೆ ಧಾವಿಸಿದ ವ್ಯಕ್ತಿಯೂ ಬಾವಿಗೆ ಬಿದ್ಧ ಘಟನೆ ಪುಲ್ಕೇರಿ ಬೈಪಾಸ್‌ ಬಳಿ ನಡೆದಿದೆ. ಜೂ. 15ರ ಬೆಳಿಗ್ಗೆ ನಾರಾಯಣ ಭಟ್‌ ಅವರ ಮನೆ ಎದುರಿನ ಬಾವಿಗೆ ಬೆಕ್ಕು ಬಿದ್ದಿದ್ದು, ಕೂಡಲೇ ನಾರಾಯಣ ಭಟ್‌ (48) ಅವರು ಬೆಕ್ಕಿನ ರಕ್ಷಣೆಗೆ ಮುಂದಾದರು. ಈ ವೇಳೆ ಆಯ ತಪ್ಪಿ ಬಾವಿಗುರುಳಿದ್ದರು. ತಕ್ಷಣವೇ ಸ್ಥಳೀಯರು ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ದಳದವರು ಬಾವಿಯಲ್ಲಿ ಸಿಲುಕಿಕೊಂಡಿದ್ದ ನಾರಾಯಣ ಭಟ್‌ ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾದರು.
ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್‌, ರೂಪೇಶ್‌, ದಿನೇಶ್‌, ಭೀಮಪ್ಪ, ನಾಗೇಶ್‌, ಸುರೇಶ್‌, ಮುಝಾಮಿರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.































































































































































error: Content is protected !!
Scroll to Top