ನನ್ನಿಂದ ತಪ್ಪಾಗಿದ್ದರೆ ನನಗೆ ಬೈಯಿರಿ, ಮನೆಯವರಿಗೆ ಹಿಂಸೆ ನೀಡಬೇಡಿ: ಅರವಿಂದ ಬೋಳಾರ್

ವಿವಾದಿತ ವಿಚಾರಕ್ಕೆ ವಿಡಿಯೋ ಮೂಲಕ ಕ್ಷಮೆ ಯಾಚನೆ

ಮಂಗಳೂರು: ತುಳು ರಂಗಭೂಮಿ ಕಲಾವಿದ, ನಟ ಅರವಿಂದ ಬೋಳಾರ್ ಅವರು ‘ನನಗೆ ಮುಸ್ಲಿಮರೇ ಫಸ್ಟ್ ಎಂದು ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಸಂದೇಶ ಹಂಚಿಕೊಂಡಿದ್ದು, ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಭರದಲ್ಲಿ ಆಡಿದ ಮಾತು ಅದು. ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.

ನಾನು ಭಾಷಣದಲ್ಲಿ ಆಡಿದ ಮಾತಿನಲ್ಲಿ ತಪ್ಪಿದ್ದರೆ ಬೈಯಿರಿ, ಆದರೆ ನನ್ನ ಮನೆಯವರಿಗೆ ಏನೂ ಹೇಳಹೇಡಿ. ನನ್ನ ಮನೆಯವರಿಗೆ ಹಿಂಸೆ ನೀಡಬೇಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ. ನನ್ನನ್ನು ಈ ವರೆಗೆ ಸರ್ವ ಧರ್ಮದ ಕಲಾಭಿಮಾನಿಗಳು ಬೆಳೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ನಾನು ನಿಮ್ಮನ್ನು ನಗಿಸುತ್ತಿದ್ದೇನೆ. ಮುಂದೆಯೂ ನಗಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.















































































error: Content is protected !!
Scroll to Top