ಜನ್ಮದಿನಕ್ಕೆ ‌ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ತಮ್ಮ 76 ನೇ ಜನ್ಮ ದಿನಕ್ಕೆ ಶುಭಹಾರೈಸಿದ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ತಮ್ಮ ಜನ್ಮದಿನದ ಹಿನ್ನೆಲೆ ದೇಶದೆಲ್ಲೆಡೆ ಹಲವಾರು ಸಾರ್ಥಕ ಕೆಲಸಗಳನ್ನು ಮಾಡಲಾಗುತ್ತಿದೆ. ಬಿಜೆಪಿ ನಡೆಸುವ ‘ಆಶೀರ್ವಾದ್ ಕಿ ದಿಯಾ’ ಕಾರ್ಯಕ್ರಮ ಹೃದಯ ಸ್ಪರ್ಶಿಸಿದೆ. ನಿಮ್ಮ ಶುದ್ಧ ಪ್ರೀತಿ, ಮನಸ್ಸಿನಿಂದ ದೇಶದ ಪ್ರತಿ ಜನರೂ ನನ್ನನ್ನು ಹಾರೈಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ನಿಮ್ಮ ಈ ಪ್ರೀತಿ ನನ್ನನ್ನು ದೇಶ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಸಾರ್ವಜನಿಕ ಸೇವಾ ಜೀವನಕ್ಕೆ 25 ವರ್ಷಗಳಾಗಿದ್ದು, ಈ ಹಿನ್ನೆಲೆ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ. ಹಾಗೆಯೇ ಸೆ. 17 ರಂದು ದೇಶದ ಪ್ರತಿ ಮನೆಗಳಲ್ಲಿಯೂ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಆಶೀರ್ವಾದದ ದೀಪ ಹಚ್ಚುವಂತೆ ವಿನಂತಿಸಲಾಗಿದೆ.























































































































error: Content is protected !!
Scroll to Top