ಶಿಲ್ಪಕಲೆಗಳ ಹಿಂದೆ ಹಲವಾರು ವಿಶ್ವಕರ್ಮರ ಪರಿಶ್ರಮ ಇದೆ: ಶಾಸಕ ವಿ. ಸುನೀಲ್ ಕುಮಾರ್

ಕಾರ್ಕಳ: ನಾಡಿನೆಲ್ಲೆಡೆ ಇಂದು ಶ್ರದ್ಧಾ ಭಕ್ತಿಯಿಂದ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತಿದೆ. ಭಾರತದೆಲ್ಲೆಡೆ, ನಮ್ಮ ಕರ್ನಾಟಕದಲ್ಲಿಯೂ ಹಲವಾರು ಶಿಲ್ಪಕಲೆಗಳನ್ನು ನಾವು ಕಾಣಬಹುದು. ಇವೆಲ್ಲದರ ಹಿಂದೆ ಹಲವಾರು ವಿಶ್ವಕರ್ಮರ ಪರಿಶ್ರಮ ಇದೆ ಎಂದು ಇತಿಹಾಸ ಹೇಳುತ್ತದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.

ಅವರು ಕಾರ್ಕಳದ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ಆಡಳಿತ ಕಾರ್ಕಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಅಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು.

ಶಿಲ್ಪಕಲೆಗಳ ನಿರ್ಮಾಣಕ್ಕೆ ಪ್ರೇರಣೆ ವಿಶ್ವಕರ್ಮ. ತಲೆತಲಾಂತರದಿಂದ ಬಂದ ಈ ಕೌಶಲ್ಯವನ್ನು ಈಗಿನ ತಂತ್ರಜ್ಞಾನ, ವೇಗಕ್ಕೆ ತಕ್ಕಂತೆ ರೂಪಿಸುಕೊಳ್ಳುವುದು ಅಗತ್ಯ. ಪ್ರಸ್ತುತ ಎಐ ಯುಗದಲ್ಲಿ ನಾವಿದ್ದೇವೆ. ತಂತ್ರಜ್ಞಾನ ಬೆಳೆಯುತ್ತಿದ್ದ ನಮ್ಮ ಕೌಶಲಗಳನ್ನು ಅದಕ್ಕೆ ತಕ್ಕಂತೆ ಹೊಂದಿಸಿಕೊಂಡು ಹೋಗಬೇಕಾದ ಅಗತ್ಯತೆ ಇದೆ. ವಿಶ್ವಕರ್ಮ ಜಯಂತಿಯಂತಹ ಕಾರ್ಯಕ್ರಮಗಳಲ್ಲಿ ಈ ಕಸುಬನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎನ್ನುವ ಚಿಂತನೆಗಳು ನಡೆದಲ್ಲಿ ನಮ್ಮ ಮುಂದಿನ ಪೀಳಿಗೆ ಇದನ್ನು ತಿಳಿದು ಮುಂದುವರೆಸಲು ಸುಲಭವಾಗಬಹುದು ಎಂದರು.

ಕಾರ್ಕಳ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿದೆ. ನಾಡಿನ ಹಲವು ದೇವಾಲಯಗಳಿಗೆ ಶಿಲ್ಪಕಲೆಗಳನ್ನು ಕಳಿಸಿಕೊಟ್ಟ ಕೀರ್ತಿ ನಮ್ಮದು ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕಾರ್ಕಳದಲ್ಲಿ ಶಿಲ್ಪಕಲೆಗಳಿಗೆ ಸಂಬಂಧಿಸಿದ ಹಾಗೆ ಹಬ್ಬಗಳನ್ನು ಮಾಡಬೇಕು. ಇದಕ್ಕೆ ಸರ್ಕಾರದಿಂದಲೇ ಜಾಗ ಕೊಟ್ಟು ಈ ಹಬ್ಬ ಮಾಡಬೇಕೆನ್ನುವ ಬಯಕೆ ಇದೆ. ಕಾರ್ಕಳದ ನಿಂಜೂರಿನಲ್ಲಿ ಇದಕ್ಕಾಗಿ ಸ್ಥಳ ಗುರುತಿಸಲಾಗಿದ್ದರೂ ಬೇರೆ ಬೇರೆ ಕಾರಣಗಳಿಂದ ಅದನ್ನು ಮುಂದುವರಿಸಲಾಗಿಲ್ಲ. ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ಕ್ಯಾಬಿನೆಟ್ ಮೀಟಿಂಗ್‌ನಲ್ಲೂ ಈ ವಿಚಾರ ಪ್ರಸ್ತಾಪಿಸುವುದಾಗಿ ಸುನೀಲ್ ಕುಮಾರ್ ಹೇಳಿದ್ದಾರೆ.

ಕಾರ್ಕಳವನ್ನು ತುಳಸೀ ಕಟ್ಟೆಗೆ ಬ್ರಾಂಡ್ ಮಾಡುವಂತೆಯೂ ಅವರು ತಿಳಿಸಿದ್ದಾರೆ. ಈ ಭಾಗದಲ್ಲಿ ವಿವಿಧ ದೇವಾಲಯಗಳು, ಬೀಚ್‌ಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಇದು ತಮ್ಮ ಶಿಲ್ಪಕಲೆಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದಲೂ ಉತ್ತಮ ಯೋಚನೆ. ಆಧುನಿಕ ಸವಾಲಿನ ನಡುವೆ ನಮ್ಮ ಕೌಶಲ್ಯವನ್ನು ರೂಪಿಸಿಕೊಳ್ಳಿ ಎಂದು ಅವರು ನುಡಿದಿದ್ದಾರೆ.

ಕಾರ್ಯಕ್ರಮದಲ್ಲಿ (ರಿಜ್ವಾನ್ ಅರ್ಷದ್, ಸಚಿವರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರಕಾರ) ಮುಖ್ಯ ಅತಿಥಿಗಳಾಗಿ ಕೋಟ ಶ್ರೀನಿವಾಸ ಪೂಜಾರಿ (ಸಂಸದರು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ), ಎಂ. ಎ. ಗಫೂರ್, ( ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಮಂಡಳಿ, ಮಂಗಳೂರು), ಮಂಜುನಾಥ ಪೂಜಾರಿ, (ಅಧ್ಯಕ್ಷರು, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ, ಬೆಂಗಳೂರು), ಎಸ್.ಎಲ್. ಭೋಜೇಗೌಡ, ( ಶಾಸಕರು ವಿಧಾನ ಪರಿಷತ್ತು), ಮಂಜುನಾಥ ಭಂಡಾರಿ, ( ಶಾಸಕರು, ವಿಧಾನ ಪರಿಷತ್ತು), ಡಾ. ಧನಂಜಯ ಸರ್ಜಿ, ( ಶಾಸಕರು, ವಿಧಾನ ಪರಿಷತ್ತು), ಕಿಶೋರ್ ಕುಮಾರ್ ಪುತ್ತೂರು, (ಶಾಸಕರು, ವಿಧಾನ ಪರಿಷತ್ತು), ಅಜಿತ್ ಹೆಗ್ಡೆ, (ಅಧ್ಯಕ್ಷರು. ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ), ರೋಹಿಣಿ ಸಿಂಧೂರಿ ದಾಸರಿ, (ಭಾ.ಅ.ಸೇ, ಸರ್ಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ (ಎಂ.ಎಸ್.ಎಂ.ಇ ಮತ್ತು ಗಣಿ) ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶ, ಇಶಿತಾ ಗುಪ್ತ,( ಐ.ಪಿ.ಎಸ್, ಸಹಾಯಕ ಪೊಲೀಸ್ ಅಧೀಕ್ಷಕರು, ಕಾರ್ಕಳ ಉಪವಿಭಾಗ, ಕಾರ್ಕಳ), ಪಿ. ರವಿ ಆಚಾರ್ಯ ಪೆರ್ವಾಜೆ, (ಆಡಳಿತ ಮೊಕ್ತಸರರು, ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ, ಕಾರ್ಕಳ), ಬಿ. ಪ್ರಕಾಶ್ ಆಚಾರ್ಯ, (ಅಧ್ಯಕ್ಷರು, ವಿ.ಬಿ.ಎಸ್ ಸಭಾ (ರಿ) ಪೆರ್ವಾಜೆ, ಕಾರ್ಕಳ), ಪಿ. ವಸಂತ ಆಚಾರ್ಯ (ಜೊತೆ ಮೊತ್ತೇಸರರು, ನೆಕ್ಲಾಜೆ, ಶ್ರೀ ಕಾಳಿಕಾಂಬ ದೇವಸ್ಥಾನ, ಕಾರ್ಕಳ), ಸುರೇಶ್ ಆಚಾರ್ಯ ನಿಟ್ಟೆ, (ಜೊತೆ ಮೊತ್ತೇಸರರು. ನೆಕ್ಲಾಜೆ, ಶ್ರೀ ಕಾಳಿಕಾಂಬ ದೇವಸ್ಥಾನ, ಕಾರ್ಕಳ) ಮೊದಲಾದವರು ಭಾಗವಹಿಸಿದ್ದರು.























































































































error: Content is protected !!
Scroll to Top