ಕಾರ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಾರ್ಕಳ ತಾಲೂಕು ಶಾಖೆಯ ವಾರ್ಷಿಕ ಮಹಾಸಭೆಯ ಪ್ರಯುಕ್ತ ಯಕ್ಷ ಗಾನ ನಾಟ್ಯ ವೈಭವ ಕಾರ್ಯಕ್ರಮವು ಸೆ. 20 ರಂದು ಅಪರಾಹ್ನ 2.30 ಕ್ಕೆ ಬಂಡಿಮಠದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯಕ್ಷರತ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳ್ಕೋಡ್ ಅವರು ಭಾಗವಹಿಸಲಿದ್ದಾರೆ.
ಹಿಮ್ಮೇಳದಲ್ಲಿ ಚಿಂತನಾ ಹೆಗಡೆ ಮಾಳ್ಕೋಡ್, ಪರಮೇಶ್ವರ ಭಂಡಾರಿ ಕೊರ್ಕಿ, ರವಿ ಕಾಡೂರು ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಕಾರ್ತಿಕ್ ಕಡ್ಜ್, ಸದಾಶಿವ ಭಟ್ ಮಳವಳ್ಳಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವು ಯಕ್ಷ ಅಭಿಮಾನಿ ಸರ್ಕಾರಿ ನೌಕರರ ಪ್ರಾಯೋಜಕತ್ವದಲ್ಲಿ ಮೂಡಿ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















































































