ಭೂಮಿ ಪೂಜೆಯಲ್ಲಿ ಉಮಾಭಾರತಿ ಭಾಗವಹಿಸುವುದಿಲ್ಲ

0

ದಿಲ್ಲಿ, ಆ. 3:  ಅಯೋಧ್ಯೆಯಲ್ಲಿ  ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದ ಪ್ರಮುಖರಲ್ಲಿ ಒಬ್ಬರಾಗಿರುವ  ಮಧ್ಯ ಪ್ರದೇಶ ಮಾಜಿ ಸಿಎಂ ಉಮಾಭಾರತಿ ಅವರಿಗೂ ಮಂದಿರದ ಭೂಮಿ ಪೂಜೆಯಲ್ಲಿ ಭಾಗವಹಿಸುವ ಭಾಗ್ಯ ಇಲ್ಲ. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಗಾನು ಭಾಗವಹಿಸುವುದಿಲ್ಲ ಎಂದು ಸ್ವತಃ  ಉಮಾಭಾರತಿಯವರೇ ಹೇಳಿಕೊಂಡಿದ್ದಾರೆ.

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಉಮಾ ಭಾರತಿ ಅವರಿಗೆ ಆಹ್ವಾನವಿದೆ. ಆದರೂ ಅವರು  ಕಾರ್ಯಕ್ರಮದಿಂದ ದೂರು ಉಳಿಯಲು ನಿರ್ಧರಿಸಿದ್ದಾರೆ.
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಗೈರಾಗುವ ಉಮಾಭಾರತಿ ಅವರ ನಿರ್ಧಾರಕ್ಕೆ ಕೊರೊನಾ ವೈರಸ್ ಕಾರಣ ಎನ್ನಲಾಗಿದೆ. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಸೇರಿದಂತೆ ಸಾವಿರಾರೂ ಹಿಂದೂಪರ ಕಾರ್ಯಕರ್ತರು  ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕಾರ್ಯಕ್ರಮದ ಸ್ಥಳದಲ್ಲಿ ಜನಸ್ತೋಮ ಸೇರಲಿದ್ದು, ಇದರಿಂದ ಕೊರೊನಾ ವೈರಸ್ ಪ್ರಸರಣದ ಭೀತಿ ಕೂಡ ಇದೆ. ಇದೇ ಕಾರಣಕ್ಕೆ ಉಮಾಭಾರತಿ ಅವರು ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ನಾನು ಭೋಪಾಲ್ ನಿಂದ ಹೊರಟು ನಾಳೆ ಸಂಜೆ ಹೊತ್ತಿಗೆ ಅಯೋಧ್ಯೆ ಸೇರುತ್ತೇನೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನನಗೂ ಕೂಡ ವೈರಸ್ ಸೋಂಕು ತಗಲಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ  ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ನಾನು ಮನೆಯಲ್ಲೇ ಇದ್ದು ಕಾರ್ಯಕ್ರಮ ವೀಕ್ಷಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಗೆ ಹೊರಟ ಬಳಿಕ ನಾನು ಆಯೋಧ್ಯೆಗೆ ತೆರಳುತ್ತೇನೆ. ಸರಯೂ ನದಿಯ ತಟದಲ್ಲಿ ವಿಹರಿಸುತ್ತೇನೆ ಎಂದು ಹೇಳಿದ್ದಾರೆ

 

Previous articleಅಯೋಧ್ಯೆಯ ರಾಮನಿಗೂ  ಓರ್ಚಾದ ರಾಮ ರಾಜನಿಗೂ ಇರುವ ಸಂಬಂಧವೇನು?
Next articleಮಾಹೆಯಿಂದ ಎರಡು ಹೊಸ ಪತ್ರಿಕೋದ್ಯಮ ಕೋರ್ಸ್‌

LEAVE A REPLY

Please enter your comment!
Please enter your name here