ರಿಟೈರ್ಡ್ ಬ್ಯಾಂಕ್ ಮ್ಯಾನೇಜರ್ ಖಾತೆಗೆ ದೋಖ

ಕಾರ್ಕಳ : ರಿಟೈರ್ಡ್ ಬ್ಯಾಂಕ್ ಮ್ಯಾನೇಜರ್‌ ಆನ್‌ಲೈನ್‌ ವಂಚನೆಗೊಳಗಾಗಿ 3 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿರುವ ಘಟನೆ ಜು. 13ರಂದು ಅಜೆಕಾರಿನಲ್ಲಿ ನಡೆದಿದೆ.
ಮರ್ಣೆ ಗ್ರಾಮದ ಶಂಕರ ಆರ್‌. ಹೆಗ್ಡೆ ಅವರು ತಮ್ಮ ಫೇಸ್‌ ಬುಕ್‌ ಖಾತೆಗೆ ಕೆನರಾ ರಿಟೈರ್ಡ್‌ ಪೆನ್ಸನ್‌ ಕಾರ್ಡ್‌ ಎಂಬ ಖಾತೆಯಿಂದ ಬಂದ ಲಿಂಕ್‌ ತೆರೆದು ಅದರಲ್ಲಿ ರಿಟೈರ್ಡ್‌ ಪೆನ್ಸನ್‌ ಕಾರ್ಡ್‌ ಬಗ್ಗೆ ಆಪ್ಲೈ ಕೊಟ್ಟಿದ್ದಾರೆ. ಈ ವೇಳೆ 6744250286, 8655389531, 6744250286 ನಂಬರಿನಿಂದ ಕರೆ ಮಾಡಿ ತಾನು ಬ್ಯಾಂಕಿನ ಮುಖ್ಯಸ್ಥ (ಎ.ಜಿ.ಎಮ್) ಮಾತನಾಡುವುದಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಹೇಳಿ ರಿಟೈರ್ಡ್‌ ಪೆನ್ಸನ್‌ ಕಾರ್ಡ್‌ನ ಲಾಭದ ಬಗ್ಗೆ ಮಾಹಿತಿ ನೀಡಿ ‌ಆಪ್‌ ಮೂಲಕ ಶಂಕರ್‌ ಅವರಿಂದ ಅವರ ಡೆಬಿಟ್‌ ಕಾರ್ಡ್‌ ನಂಬ್ರ, ಪಿನ್‌ ನಂಬ್ರ ಹಾಗೂ ಇತರ ವೈಯುಕ್ತಿಕ ಮಾಹಿತಿಯನ್ನು ಪಡೆದು ಖಾತೆಯಿಂದ 1,24,000 ರೂ. ಮತ್ತು ಕ್ರೆಡಿಟ್ ಕಾರ್ಡ್‌ನಿಂದ 2,49,000 ರೂ‌. ಸೇರಿ ಒಟ್ಟು 3,73,000 ರೂ. ಯನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







































































































































error: Content is protected !!
Scroll to Top