ನರೇಗಾ ಉದ್ಯೋಗ ಚೀಟಿಗೆ ಇ-ಕೆವೈಸಿ ಕಡ್ಡಾಯ – ಜೂ. 30 ಕೊನೆಯ ದಿನ

ಕಾರ್ಕಳ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯಡಿ ಉದ್ಯೋಗ ಚೀಟಿ (Job card) ಹೊಂದಿರುವ ಎಲ್ಲಾ ಕೂಲಿ ಕಾರ್ಮಿಕರ/ಫಲಾನುಭವಿಗಳ ಉದ್ಯೋಗ ಚೀಟಿಗೆ ಆಧಾರ್ ಕಾರ್ಡ್‌ ಸಂಖ್ಯೆಯೊಂದಿಗೆ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಇದು ಕೂಲಿ ಹಣ ಪಾವತಿಯಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಿದೆ.

ಈಗಾಗಲೇ ಕಾರ್ಕಳ ತಾಲೂಕಿನ 27 ಗ್ರಾಮ ಪಂಚಾಯತ್‌ಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಆರಂಭಗೊಂಡಿದ್ದು, ಉದ್ಯೋಗ ಚೀಟಿ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಉದ್ಯೋಗ ಚೀಟಿಗೆ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ. ಇ-ಕೆವೈಸಿ ಮಾಡದೇ ಇದ್ದಲ್ಲಿ ಉದ್ಯೋಗ ಚೀಟಿ ರದ್ದಾಗಲಿದೆ. ಇ-ಕೆವೈಸಿ ಮಾಡಿಕೊಳ್ಳದ ಫಲಾನುಭವಿಗೆ ನರೇಗಾ ಯೋಜನೆಯಡಿ ಯಾವುದೇ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಸದುಪಯೋಗ ಪಡೆಯಲು ಸಾಧ್ಯವಿಲ್ಲ.

ವಿಬಿ-ರಾಮ್ ಜಿ
ಜುಲೈ 1 ರಿಂದ ವಿಬಿ-ರಾಮ್ ಜಿ ಯೋಜನೆಯು ಅನುಷ್ಠಾನಗೊಳ್ಳುದರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ನರ‍್ದೇಶನ ನೀಡಲಾಗಿರುತ್ತದೆ.

ಇ-ಕೆವೈಸಿ ಪ್ರಯೋಜನ

  • ನರೇಗಾ ಕೂಲಿ ಪಾವತಿಗೆ ಇ-ಕೆವೈಸಿ ಕಡ್ಡಾಯವಾಗಿದೆ.
  • ನಕಲಿ ಜಾಬ್‌ ಕಾರ್ಡ್‌ ತಡೆ.

ಇ-ಕೆವೈಸಿ ಮಾಡುವ ವಿಧಾನ
•ಫಲಾಭವಿಗಳು ಆಧಾರ್ ಕಾರ್ಡ್‌ ಮತ್ತು ಜಾಬ್ ಕಾರ್ಡ್‌ ಅನ್ನು ತೆಗೆದುಕೊಂಡು ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಬಹುದು.
•ಪಂಚಾಯತ್ ಸಿಬ್ಬಂದಿಯವರು ಫೇಸ್ ಅಥೆಂಟಿಕೇಶನ್ (Face Authentication – ಮುಖದ ಗುರುತು) ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
•ಎನ್ಎಂಎಂಎಸ್ (NMMS) ಆಪ್ ಮೂಲಕ ಸ್ಕ್ಯಾನ್ ಮಾಡಿ ಇ-ಕೆವೈಸಿ ಅಪ್ಡೇಟ್ ಮಾಡಲಾಗುವುದು.

ನರೇಗಾ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಎನ್.ಎಮ್.ಎಮ್.ಎಸ್. ಹಾಜರಾತಿ ಕಡ್ಡಾಯ (NMMS App Face Authentication)
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ವೈಯಕ್ತಿಕ ಕಾಮಗಾರಿಗಳಾದ ಕೃಷಿ ನೀರಾವರಿ ಬಾವಿ, ದನದ ಹಟ್ಟಿ, ಕೋಳಿಶೆಡ್, ಬಚ್ಚಲು ಗುಂಡಿ, ಗೊಬ್ಬರ ಗುಂಡಿ, ಎರೆಹುಳು ತೊಟ್ಟಿ ಇತ್ಯಾದಿ ಹಾಗೂ ಸಮುದಾಯ ಕಾಮಗಾರಿಗಳ ಕೆಲಸ ನಡೆಯುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಹಾಜರಾತಿಯನ್ನು ಎನ್.ಎಮ್.ಎಮ್.ಎಸ್. ಆಪ್ ಮೂಲಕ ದಾಖಲಿಸುವುದು ಅತ್ಯಗತ್ಯ. ಎನ್.ಎಮ್.ಎಮ್.ಎಸ್. ಆಪ್ ಮೂಲಕ ಹಾಜರಾತಿ ದಾಖಲಿಸದೇ ಇದ್ದಲ್ಲಿ ಅಂತಹ ಕಾಮಗಾರಿಗೆ ನರೇಗಾ ಅನುದಾನ ಪಡೆಯಲು ಸಾಧ್ಯವಿರುವುದಿಲ್ಲ.

ಏನಿದು (NMMS Face auth app ?
ಇದು ನರೇಗಾ ಕೆಲಸದ ಸ್ಥಳದಲ್ಲಿ ಕಾರ್ಮಿಕರ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಹಾಜರಾತಿ ಪಡೆಯುವ ಆಧುನಿಕ ತಂತ್ರಜ್ಞಾನವಾಗಿದೆ. ಇದನ್ನು ಮೇಟ್ (Mate), GKM ಅಥವಾ ಪಂಚಾಯತ್ ಅಧಿಕೃತ ಅಧಿಕಾರಿ/ ಸಿಬ್ಬಂದಿ ಬಳಕೆ ಮಾಡುತ್ತಾರೆ.

ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರ್ಮಿಕರ ಹಾಜರಾತಿಯು ಎನ್.ಎಮ್.ಎಮ್.ಎಸ್. ಮೂಲಕ ಪಡೆಯುವುದು ಕಡ್ಡಾಯವಾಗಿರುವುದರಿಂದ ಅರ್ಹ ಫಲಾನುಭವಿಗಳು ತಮ್ಮಲಿರುವ ಮೊಬೈಲ್ ಪೋನ್‌ನಲ್ಲಿ ರಿಜಿಸ್ಟ್ರೇಶನ್ ಆಗಿ ಹಾಜರಾತಿ ಪಡೆಯವುದು. ಈ ಮೂಲಕ ಕಾಮಗಾರಿಗಳನ್ನು ಪ್ರಾರಂಭಿಸಿ ನಿಗದಿತ ಕೂಲಿ ಹಣ ಪಡೆಯಬಹುದಾಗಿದೆ.















































































error: Content is protected !!
Scroll to Top