ಕದನ ವಿರಾಮದ ಬಳಿಕ ಮೊದಲ ಬಾರಿ ಇಸ್ರೇಲ್‌ ಮೇಲೆ ಇರಾನ್‌ ಮಿಸೈಲ್‌ ದಾಳಿ

ಟೆಲ್‌ ಅವಿವ್‌ : ಏಪ್ರಿಲ್‌ನಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ ಇರಾನ್ ಮೊದಲ ಬಾರಿಗೆ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.
ಕಳೆದ ಕೆಲ ದಿನಗಳಿಂದ ಅಮೆರಿಕದ ವಿನಂತಿಗಳನ್ನ ಧಿಕ್ಕರಿಸುತ್ತಲೇ ಬಂದ ಇರಾನ್‌ ಯಾವುದೇ ಎಚ್ಚರಿಕೆಯಿಲ್ಲದೇ ಇಸ್ರೇಲ್‌ನ ಬೈರೂತ್‌ನ ದಕ್ಷಿಣ ಉಪನಗರಗಳನ್ನ ಗುರಿಯಾಗಿಸಿ ಇರಾನ್‌ ಮಿಸೈಲ್‌ ದಾಳಿ ನಡೆಸಿದೆ.

ಶಾಂತಿ ಒಪ್ಪಂದ ಅಂತಿಮ ಹಂತದಲ್ಲಿರುವಂತೆಯೇ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಸಂಘರ್ಷ ಹೆಚ್ಚಾಗಿದೆ. ಇದರಿಂದಾಗಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ. ಇರಾನ್‌ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಸಂಭವನೀಯ ಪ್ರತಿಕ್ರಿಯೆಗಾಗಿ ತನ್ನ ಪಶ್ಚಿಮ ವಾಯುಪ್ರದೇಶವನ್ನ ಇರಾನ್‌ ಮುಚ್ಚಿದೆ. ಸಂಭಾವ್ಯ ಇಸ್ರೇಲಿ ಆಕ್ರಮಣಕ್ಕೆ ಸಿದ್ಧವಾಗಲು ನೆರೆಯ ಇರಾಕ್ ಮತ್ತು ಸಿರಿಯಾ ಕೂಡ ತಮ್ಮ ವಾಯುಸೀಮೆಯನ್ನ ಬಂದ್‌ ಮಾಡಿವೆ.

ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಲೆಬನಾನ್‌ನ ಮೇಲೆ ಇಸ್ರೇಲ್‌ನಿಂದ ನಿರಂತರ ದಾಳಿ ನಡೆಯುತ್ತಿದ್ದರಿಂದ ಪ್ರತಿದಾಳಿ ನಡೆಸಲಾಗಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ. ಇತ್ತ ಇರಾನ್ ಕ್ಷಿಪಣಿಗಳನ್ನ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿರುವ ಇಸ್ರೇಲ್‌ ಮಿಲಿಟರಿ ಪಡೆ, ಪ್ರತೀಕಾರಕ್ಕೆ ದಾಳಿಗೆ ಮುಂದಾಗುತ್ತಿದೆ. ಮತ್ತೊಂದು ಕಡೆ ಇರಾನ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸಹ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ನೆತನ್ಯಾಹುಗೆ ಟ್ರಂಪ್‌ ವಾರ್ನಿಂಗ್‌
ಈ ಮಧ್ಯೆ ಇಸ್ರೇಲ್‌ ಮೇಲೆ ದಾಳಿ ನಡೆಸಿದ ಹೊರತಾಗಿಯೂ ಬೆಂಜಮಿನ್‌ ನೆತನ್ಯಾಹು ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನಿಂಗ್‌ ಕೊಟ್ಟಿದ್ದಾರೆ. ಇರಾನ್‌ನ ಕ್ಷಿಪಣಿ ದಾಳಿ‌ಗೆ ಪ್ರತೀಕಾರ ತೀರಿಸಿಕೊಳ್ಳಬೇಡಿ, ರಾಜತಾಂತ್ರಿಕತೆಗೆ ಹೆಚ್ಚಿನ ಸಮಯ ನೀಡಬೇಕೆಂದು ನೆತನ್ಯಾಹುಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.















error: Content is protected !!
Scroll to Top