ಕಾರ್ಕಳ : ರೈತರ ಬೇಡಿಕೆಗಳ ಬಗ್ಗೆ ಸುನಿಲ್‌ ಕುಮಾರ್‌ ಸಮಾಲೋಚನೆ

ಕಾರ್ಕಳ : ಕಾರ್ಕಳ ತಾಲೂಕಿನ ರೈತರುಗಳ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಾರ್ಕಳ ಶಾಸಕರು ಹಾಗೂ ಸರಕಾರಿ ಮುಖ್ಯ ಸಚೇತಕರಾದ ವಿ. ಸುನಿಲ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕಾರ್ಕಳ ತಾಲೂಕು  ಭಾರತೀಯ ಕಿಸಾನ್ ಸಂಘ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಯಿತು.
ಕಾರ್ಕಳ ತಾಲೂಕಿನ ತರಕಾರಿ,ಹಣ್ಣುಹಂಪಲು, ಇನ್ನಿತರ  ಕೃಷಿ ಉತ್ಪನ್ನಗಳನ್ನು (ಬಿಳಿ ಬೆಂಡೆ, ಕಜೆಜಯ ಅಕ್ಕಿ(ಕೆಂಪಕ್ಕಿ), ಮುಂತಾದವು) ದೇಶಿಯ ಬ್ರಾಂಡ್ ಮಾಡುವ ಪ್ರಸ್ತಾವದ  ಬಗ್ಗೆ ಚರ್ಚಿಸಿ,  ಈ ಸಂಬಂಧ ಜು. 25ರಂದು ಕೃಷಿ ವಿಜ್ಞಾನಿಗಳು, ಇಲಾಖಾ ಅಧಿಕಾರಿಗಳು ಮತ್ತು ರೈತರೊಟ್ಟಿಗೆ ಕಾರ್ಯಕ್ರಮ ನಡೆಸಲು ನಿರ್ಣಯಿಸಲಾಯಿತು.
ಭತ್ತದ ಕೃಷಿ, ತೋಟಗಾರಿಕೆ ಮತ್ತು ಮೆಸ್ಕಾಂ ಇಲಾಖೆ ವಿಚಾರವಾಗಿ ಚರ್ಚಿಸಿ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು  ಶಾಸಕರು ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾದ ನವೀನ್ ಚಂದ್ರ ಜೈನ್, ಮಾಜಿ ಜಿಲ್ಲಾಧ್ಯಕ್ಷರಾದ ಬಿ.ವಿ ಪೂಜಾರಿ, ಕಾರ್ಕಳ ಕಿಸಾನ್ ಸಂಘದ ಅಧ್ಯಕ್ಷರಾದ ಉಮಾನಾಥ ರಾನಡೆ ಹಾಗು ಪದಾಧಿಕಾರಿಗಳು ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.













































































































































































error: Content is protected !!
Scroll to Top