ನಿವೃತ್ತ ಶಿಕ್ಷಕ ಉದಯ ಶೆಟ್ಟಿ ಅವರಿಗೆ ಸನ್ಮಾನ

ಕಾರ್ಕಳ : ಹಿರ್ಗಾನ ಗ್ರಾಮದ ಚಿಕ್ಕಲ್ಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿರುವ ಉದಯ ಶೆಟ್ಟಿ ಬಿ. ಹಾಗೂ ಅವರ ಪತ್ನಿ ಅಮಿತಾ ಉದಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸಂಜೀವ ಪೂಜಾರಿ, ಕರ್ನಾಟಕ ಬ್ಯಾಂಕ್‌ ನಿವೃತ್ತ ಮಹಾ ಪ್ರಬಂಧಕರಾದ ನಾಗರಾಜ್ ರಾವ್, ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ಗೋವಿಂದ ಜೋಗಿ, ನಿವೃತ್ತ ಶಿಕ್ಷಕ ಜನಾರ್ಧನ ಹೆಗ್ಡೆ ಹೆಪ್ಪಳ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ತಾರಾನಾಥ್ ಶೆಟ್ಟಿ, ದಿನೇಶ್ ಪೂಜಾರಿ, ಭವ್ಯಾ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಪ್ರೀತೇಶ್ ಶೆಟ್ಟಿ, ಜೀವಾನಂದ ಶೆಟ್ಟಿ ಯರ್ಲಪಾಡಿ, ಪ್ರಭಾಕರ ಹೆಗ್ಡೆ, ಯರ್ಲಪಾಡಿ, ಮಹೇಶ್ ಶೆಟ್ಟಿ ಕಣಿಲ, ದಯಾನಂದ ಪ್ರಭು ಹೆಪ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಆಶಾ ವರದಿ ವಾಚಿಸಿದರು. ಶಿಕ್ಷಕರಾದ ವಿಜಯ ಸ್ವಾಗತಿಸಿ, ಸ್ನೇಹ ವಂದಿಸಿದರು. ಮುಖ್ಯಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.















































































































































error: Content is protected !!
Scroll to Top