ಮಂಗಳೂರು: ಮಂಗಳೂರಿನ ಅಡ್ಯಾರ್ ಗಾರ್ಡನನಲ್ಲಿ ನಡೆದ JCI ಸಂಸ್ಥೆಯ ವಲಯ ಸಮ್ಮೇಳನ ‘ಆರ್ಯ 2026’ ದಲ್ಲಿ ವಲಯ ಉಪಾಧ್ಯಕ್ಷ ಅರುಣ್ ಪೂಜಾರಿ ಮಾಂಜ ಅವರು ಅತ್ಯುತ್ತಮ ವಲಯ ಉಪಾಧ್ಯಕ್ಷ ವಿನ್ನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಲಯಾಧ್ಯಕ್ಷ ಸಂತೋಷ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ಘೋಷಣೆ ಮಾಡಿ ಅರುಣ್ ಅವರನ್ನು ಸನ್ಮಾನಿಸಿದ್ದಾರೆ.
ಅರುಣ್ ಮಾಂಜ ಅವರು 2026 ರಲ್ಲಿ ನಡೆಸಿದ ಕಾರ್ಯಕ್ರಮಗಳು, ಸದಸ್ಯತನ ಅಭಿವೃದ್ಧಿ, ಚಾರಿಟೇಬಲ್ ಟ್ರಸ್ಟಿಗೆ ದೇಣಿಗೆ, ಘಟಕಗಳಿಗೆ ನೀಡಿದ ಮಾರ್ಗದರ್ಶನ ಮತ್ತು ನೇತೃತ್ವವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅವರು ಕಾರ್ಕಳ ರೂರಲ್ ಜೇಸಿ ಘಟಕದ ಪೂರ್ವಾಧ್ಯಕ್ಷ ಮತ್ತು ನ್ಯೂಸ್ ಕಾರ್ಕಳದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.










































