ಕಡಲ್ಗಳ್ಳರ ದಾಳಿ ವೇಳೆ ರಕ್ಷಣಾ ಕಾರ್ಯ – ಮರೆಯಲಾಗದ ಕ್ಷಣ

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತಿದೆ. ಸಾಧಿಸುವ ಛಲ, ನಿರ್ದಿಷ್ಟ ಗುರಿ ಇದ್ದರೆ ಜೀವನದಲ್ಲಿ ಗೆಲುವು ನಿಶ್ವಿತ ಎನ್ನುವುದಕ್ಕೆ ಒಂದು ನಿದರ್ಶನ ಭಾರತೀಯ ನೌಕಾಪಡೆಯ ಕಮಾಂಡರ್‌ ಕಾರ್ಕಳದ ಅಶ್ವಿನ್ ಎಂ. ರಾವ್.

ನಮ್ಮೂರ ಸಾಧಕರು ವಿಶೇಷ ಸರಣಿಯಲ್ಲಿ ಈ ವಾರ ಕಾರ್ಕಳದ ಅಶ್ವಿನ್‌ ಎಂ. ರಾವ್. ಅವರ ಜೀವನ, ಸಾಧನೆ ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.
ಶ್ರೀಮದ್ ಭುವನೇಂದ್ರ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ವಿ. ಮನೋಹರ ರಾವ್ ಹಾಗೂ ತೆಳ್ಳಾರು ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕಿ, ರಾಜ್ಯ ಪ್ರಶಸ್ತಿ ವಿಜೇತೆ ಸಾವಿತ್ರಮ್ಮ ದಂಪತಿಯ ಪುತ್ರ ಇವರು. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಪೆರ್ವಾಜೆ, ಪ್ರೌಢ ಶಿಕ್ಷಣವನ್ನು ಶ್ರೀ ಭುವನೇಂದ್ರ ಪ್ರೌಢಶಾಲೆ, ಬಿಇ ಪದವಿಯನ್ನು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಪೂರೈಸಿರುತ್ತಾರೆ.

ದೇಶ ಸೇವೆ ತುಡಿತ
ದೇಶ ಸೇವೆ ಮಾಡಬೇಕೆಂಬ ತಮ್ಮ ಬಾಲ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯನ್ನು ಸೇರಿ, ಇಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. 2005ರಲ್ಲಿ ರಾಷ್ಟ್ರಪತಿಯವರ ಆಯೋಗದ ಮೂಲಕ ಆಯೋಜಿತ ಅಧಿಕಾರಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅ‍ಶ್ವಿನ್ ಬಳಿಕ ಭಾರತೀಯ ನೌಕಾಪಡೆಯ ವಿವಿಧ ಯುದ್ಧನೌಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಐಎನ್ಎಸ್ ತಬರ್, ಐಎನ್ಎಸ್ ವಲ್ಸುರಾ, ಐಎನ್ಎಸ್ ತಲ್ವಾರ್, ಐಎನ್ಎಸ್ ಗರುಡ ಮತ್ತು ಐಎನ್ಎಸ್ ಶಾರದಾ ಈ ಎಲ್ಲಾ ನೌಕೆಗಳಲ್ಲಿ ಅವರು ವಿಭಿನ್ನ ಹೊಣೆಗಾರಿಕೆಗಳಲ್ಲಿ ನಿಭಾಯಿಸಿದ್ದಾರೆ. ಭಾರತೀಯ ನೌಕಾಪಡೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿರುವ ಕಮಾಂಡರ್ ಅಶ್ವಿನ್ ಎಂ. ರಾವ್ ಅವರು ಇತ್ತೀಚೆಗೆ ಕರ್ನಾಟಕ ನೌಕಾ ಘಟಕದ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ಸ್ವೀಕರಿಸಿರುತ್ತಾರೆ.

2005ರಿಂದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಮೂರು ಪಿಜಿ ಪದವಿಗಳನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ. ಎಂ.ಎಸ್‌ಸಿ. ಇಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ತಂತ್ರಜ್ಞಾನದಲ್ಲಿ (CUSAT, ಕೊಚ್ಚಿ), ಎಂ.ಟೆಕ್. ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ (CUSAT, ಕೊಚ್ಚಿ), ಐಐಟಿ, ಕಾನ್ಪುರದಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್. ಪದವಿ ಪಡೆದಿರುತ್ತಾರೆ.
ಅಶ್ವಿನ್‌ ಅವರಿಗೆ ಸೀ ಹರಿಯರ್, ಕಿರಣ್ ಮತ್ತು ಭಾರತೀಯ ನೌಕಾಪಡೆಯ ಅನ್ಮಾನವಾಹನ (UAV) ವಿಮಾನ ವ್ಯವಸ್ಥೆಗಳಲ್ಲಿ ವಿಶಾಲ ಅನುಭವವಿದೆ. ಅವರು ಡಿಆರ್‌ಡಿಒ (DRDO) ಮತ್ತು ಸಾರ್ವಜನಿಕ ಉದ್ಯಮ ಘಟಕಗಳೊಂದಿಗೆ (PSUs) ಹಲವಾರು ನೌಕಾ ಯೋಜನೆಗಳನ್ನು ನಿರ್ವಹಿಸಿದ್ದಾರೆ.

ನೇವಿ ಮುಖ್ಯಸ್ಥರ ಪದಕ
2018 ರಿಂದ 2020ರ ವರೆಗೆ Naval Institute of Aeronautical Technology ಕೊಚ್ಚಿಯಲ್ಲಿ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದಾಗ ತಮ್ಮ ತಾಂತ್ರಿಕ ನವೋತ್ಪತ್ತಿ, ತರಬೇತಿಯ ಬಲವರ್ಧನೆ ಮತ್ತು ಕರ್ತವ್ಯನಿಷ್ಠೆಗೆ ನೇವಿ ಮುಖ್ಯಸ್ಥರ ಪದಕ (Chief of Naval Staff Medal) ವನ್ನು ಗಳಿಸಿರುತ್ತಾರೆ.

ಡಿಆರ್‌ಡಿಒ ಬೆಂಗಳೂರು ಶಾಖೆಯಲ್ಲಿ ನೌಕಾ ವಿಭಾಗದ ಮುಖ್ಯಸ್ಥರಾಗಿದ್ದಾಗ ಮಹತ್ವದ ನೌಕಾ ಯೋಜನೆಗಳ ನೇತೃತ್ವ ವಹಿಸಿದ್ದು ನೌಕಾಪಡೆಗೆ ಸಮರ್ಪಿತವಾದ ಸೇನಾ ವಿಮಾನ ಯೋಗ್ಯತೆ ಪ್ರಮಾಣೀಕರಣ ಕೇಂದ್ರವನ್ನು ಸ್ಥಾಪಿಸಲು ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆಯುವಲ್ಲಿ ಅಶ್ವಿನ್‌ ಪ್ರಮುಖ ಪಾತ್ರವಹಿಸಿದ್ದರು. ಬೆಂಗಳೂರು ನೌಕಾ ಸಂಪರ್ಕ ಕೋಶದ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಅವರು HAL ತಂಡದೊಂದಿಗೆ 32ಕ್ಕಿಂತ ಹೆಚ್ಚು ALH MK I, ALH MK III, ಕಾಮೊವ್ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಉತ್ಪಾದನೆಗೆ ಯಶಸ್ವಿಯಾಗಿ ಸಹಕರಿಸಿದ್ದರು. ಪ್ರಸ್ತುತ 6ನೇ ಕರ್ನಾಟಕ ನೌಕಾ ಘಟಕ NCC ಉಡುಪಿಯ ಕಮಾಂಡರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅ‍ಶ್ವಿನ್‌ ಕಾರ್ಕಳದವರು ಎನ್ನುವ ಹೆಮ್ಮೆ ನಮ್ಮದು.

2018 ರಿಂದ 2020ರ ವರೆಗೆ Naval Institute of Aeronautical Technology ಕೊಚ್ಚಿಯಲ್ಲಿ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದಾಗ, ತಮ್ಮ ತಾಂತ್ರಿಕ ನವೋತ್ಪತ್ತಿ, ತರಬೇತಿಯ ಬಲವರ್ಧನೆ ಮತ್ತು ಕರ್ತವ್ಯನಿಷ್ಠೆಗೆ ನೇವಿ ಮುಖ್ಯಸ್ಥರ ಪದಕ (Chief of Naval Staff Medal) ವನ್ನು ತಮ್ಮದಾಗಿಸಿಕೊಂಡಿದ್ದರು.

ಮರೆಯಲಾರದ ಕ್ಷಣ
2017ರಲ್ಲಿ ಐಎನ್ಎಸ್ ಶಾರದಾದಲ್ಲಿ ಪೆಟ್ರೋಲಿಯಂ ಆಫ್‌ ಗಲ್ಫ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭ ನಮ್ಮ ನೇವಿಯ ಹೆಡ್‌ಕಾರ್ಟಸ್‌ನಿಂದ ಗುಜರಾತ್‌ ಮೂಲದ ಹಡಗಿಗೆ ಕಡಲ್ಗಳ್ಳರಿಂದ ದಾಳಿಯಾಗಿದೆ ಎಂದು ಮೇಸೆಜ್‌ ಬಂದಿತ್ತು. ಆ ವೇಳೆ ನಾವು ಆ ಹಡಗನ್ನು ರಕ್ಷಿಸಿ ನಾಲ್ವರು ಕಳ್ಳರನ್ನು ಹಿಡಿದಿದ್ದೆವು. ಈ ರೀತಿಯ ರಕ್ಷಣಾ ಕಾರ್ಯಾಚರಣೆ ನನ್ನ ಜೀವನದಲ್ಲಿ ಅದೇ ಮೊದಲ ಬಾರಿ. ಇದು ನನ್ನ ಜೀವನದ ಮರೆಯಲಾಗದ ಘಟನೆ. ಏಕೆಂದರೆ ಅದು ಮಳೆಗಾಲದ ಸಂದರ್ಭವಾಗಿದ್ದು ಸಮುದ್ರದಲ್ಲಿ ಅಲೆಗಳ ಮಟ್ಟವು ಅಧಿಕವಾಗಿತ್ತು. ನಾವು ರಕ್ಷಣಾ ಕಾರ್ಯಾಚರಣೆ ಮುಗಿಸಿ ಹಿಂದಿರುಗುವಾಗ ನಮ್ಮ ಶಿಪ್‌ನ ಮುಂಭಾಗ (ಫಾಕ್ಸೆಲ್)‌ ಸಮುದ್ರದ ಒಳಗೆ ಹೋಗುತ್ತಿತ್ತು. ನಾವು ಕಮಾಡೆಂಟ್‌ ಕಂಟ್ರೋಲ್‌ ಮಾಡುವ ಜಾಗ (ಬ್ರಿಡ್ಜ್)‌ 4 ರಿಂದ 6 ಸೆಕೆಂಡ್‌ ನೀರಿನ ಒಳಗೆ ಇರುತ್ತಿತ್ತು. ಶಿಪ್‌ ಮುಳುಗಿತ್ತು ಎನ್ನುವಷ್ಟರಲ್ಲಿ ಮೇಲೆ ಬರುತ್ತಿತ್ತು, ಮತ್ತೆ ಮುಳುಗುತ್ತಿತ್ತು. ಸುಮಾರು 4-5 ಗಂಟೆ ಇದೇ ಪರಿಸ್ಥಿತಿಯಿತ್ತು. ಅದುವರೆಗೆ ಇಂತಹ ಅನುಭವ ಜೀವನದಲ್ಲಿ ಆಗೇ ಇರಲಿಲ್ಲ ಎನ್ನುತ್ತಾರೆ ಅಶ್ವಿನ್.

ತಂದೆ – ತಾಯಿಯೇ ರೋಲ್ ಮಾಡೆಲ್
ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಸಣ್ಣ ವಯಸ್ಸಿನಲ್ಲೇ ನನಗೆ ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವಲ್ಲಿ ನನ್ನ ತಂದೆ ತಾಯಿಯರ ಪಾತ್ರ ಮಹತ್ತರವಾಗಿದೆ. ಅವರೇ ನನ್ನ ಜೀವನದ ರೋಲ್‌ ಮಾಡೆಲ್ ಎಂದು ಹೇಳುತ್ತಾರೆ ಅಶ್ವಿನ್.‌

ಪ್ರಭಾವ ಬೀರಿದವರು
ನನ್ನ ಜೀವನಕ್ಕೆ ಸ್ವಾಮಿ ವಿವೇಕಾನಂದರು ಮತ್ತು ಸುಭಾಷ್‌ಚಂದ್ರ ಬೋಸ್ ಹಾಗೂ ಅಬ್ದುಲ್‌ ಕಲಾಂ ಅವರು ಪ್ರಭಾವ ಬೀರಿದ ಮಹಾನ್‌ ಪುರುಷರು. ಅವರೇ ನನ್ನ ಜೀವನದ ಸ್ಫೂರ್ತಿ ಎನ್ನುತ್ತಾರೆ.‌

ವಿದ್ಯಾರ್ಥಿಗಳಿಗೆ ಮಾಹಿತಿ
ಕಳೆದ 3 ವರ್ಷಗಳಿಂದ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದು, ದೇಶ ಪ್ರೇಮದ ಅರಿವು ಮೂಡಿಸುವುದರೊಂದಿಗೆ ನೌಕಪಡೆಯಲ್ಲಿರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ನನ್ನ ಉದ್ದೇಶ ಎಂದು ಅಶ್ವಿನ್‌ ಅವರು ನ್ಯೂಸ್‌ ಕಾರ್ಕಳದೊಂದಿಗೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ.































































































error: Content is protected !!
Scroll to Top