ಮೇ 26-27 : ಕೌಡೂರು ಮಹಾಮ್ಮಾಯಿ ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನ ಕಾಲಾವಧಿ ರಾಶಿ ಮಾರಿಪೂಜೆ

ಕಾರ್ಕಳ : ಕೌಡೂರು-ಬೈಲೂರು ಶ್ರೀ ಮಹಾಮ್ಮಾಯಿ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ರಾಶಿ ಪೂಜಾ ಮಹೋತ್ಸವ ಮೇ 26-27ರಂದು ನಡೆಯಲಿದೆ. ಬೆಳ್ತಂಗಡಿ ಕೊಯ್ಯೂರು ಬ್ರಹ್ಮಶ್ರೀ ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಮೇ 25ರಂದು ಬೆಳಿಗ್ಗೆ ವಾರ್ಷಿಕ ವರ್ಧಂತಿಯ ಸಲುವಾಗಿ ಮಹಾಮ್ಮಾಯಿ ದೇವಿಗೆ ನವಕ ಪ್ರಧಾನ ಹೋಮ ಸಹಿತ ಪೂಜಾಧಿಗಳು ನಡೆಯಲಿದ್ದು, ಮೇ 26ರಂದು ಬೈಲೂರು ಪೇಟೆ ಉಚ್ಚಂಗಿ ಕಟ್ಟೆಯಲ್ಲಿ ಉಚ್ಚಂಗಿ ದೇವಿಯ ಪ್ರತಿಷ್ಠೆಯಾಗಿ ಆ ಬಳಿಕ ಧಾರ್ಮಿಕ ವಿಧಿ ವಿಧಾನಗಳು ನಡೆದು ರಾತ್ರಿ 10 ಗಂಟೆಗೆ ಉಚ್ಚಂಗಿ ಗುಡಿಯಲ್ಲಿ ಶ್ರೀ ದೇವಿಯ ಪ್ರತಿಷ್ಠೆ, 12 ಗಂಟೆಗೆ ಶ್ರೀ ದೇವಿಗೆ ಬಲಿ ಸೇವಾ ಸಹಿತ ಪೂಜೆ ನಡೆಯಲಿದೆ. ಮೇ 27ರಂದು ಬೆಳಿಗ್ಗೆ 7 ಗಂಟೆಯಿಂದ ಪೂಜಾ ಕಾರ್ಯಗಳು ಆರಂಭವಾಗಿ ಮಧ್ಯಾಹ್ನ 12 ಗಂಟೆಗೆ ಅರಮನೆ ಪೂಜೆ, ದೇವಿ ದರ್ಶನ, ಸಂಜೆ 5.30ಕ್ಕೆ ಶ್ರೀ ದೇವಿಯ ಮೆರವಣಿಗೆ, ವಿಸರ್ಜನಾ ಪೂಜೆ ನೆರವೇರಲಿದೆ.

ಮೇ 26ರಂದು ರಾತ್ರಿ 10 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಸ್ವರ ಬಾಂಧವ್ಯ ಮೆಲೋಡಿಸ್‌ ಕಾರ್ಕಳ ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.









































































error: Content is protected !!
Scroll to Top