ಮೇ 29 – 31 : ಹಲಸು ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ

ಕಾರ್ಕಳ : ದೀಪಂ ಸಂಸ್ಥೆ ಮತ್ತು ನಮ್ಮ ಕಾರ್ಲ ಸುದ್ದಿವಾಹಿನಿಯ ಪ್ರಾಯೋಜಕತ್ವದಲ್ಲಿ ಮೇ 29, 30, 31ರಂದು ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಹಲಸು ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ ನಡೆಯಲಿದೆ.

ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದ್ದು, ರಾಸಾಯನಿಕ ಮುಕ್ತ ಹಣ್ಣುಗಳು ಹಾಗೂ ತಿನಿಸುಗಳು, ಬಗೆ ಬಗೆಯ ಮಾವು, ಹಲಸಿನ ಹಣ್ಣು, ಮಾವಿನ ಹೋಳಿಗೆ, ಜಿಲೇಬಿ, ಹಲಸಿನ ಮಂಚೂರಿ, ಕಬಾಬ್, ಮಿಲ್ಕ್ ಶೇಕ್, ಐಸ್ ಕ್ರೀಮ್, ಹಣ್ಣಿನ ಗಿಡಗಳು, ತರಕಾರಿ ಬೀಜಗಳು, ಆಯುರ್ವೇದಿಕ್ ಉತ್ಪನ್ನಗಳು, ಮನೆಯಲ್ಲಿ ತಯಾರಿಸಿದ ವಿವಿಧ ರೀತಿಯ ಮಸಾಲೆಗಳು, ಹಪ್ಪಳ-ಸಂಡಿಗೆ, ಉಪ್ಪಿನಕಾಯಿ, ಸ್ವದೇಶಿ ಖಾದಿ ಸೀರೆಗಳು, ಚೂಡಿದಾರ್, ಗೃಹಬಳಕೆ ವಸ್ತುಗಳು ಆಧುನಿಕ ಆಭರಣಗಳ ಸೇರಿದಂತೆ ಹಲವು ಮಳಿಗೆಗಳು ಈ ಮೇಳದಲ್ಲಿ ಲಭ್ಯವಿದೆ. ಇದಲ್ಲದೆ ಬಳಕೆಯಾಗದ ಹಳೆ ಸೀರೆಗಳನ್ನು ಮೇಳದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9742513595 / 7619420510 ನಂಬರನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.









































































error: Content is protected !!
Scroll to Top