ಕೊಳಕೆ ಇರ್ವತ್ತೂರು ಶಾಲೆಯಲ್ಲಿ ಯಕ್ಷಗಾನ ತರಬೇತಿಗೆ ಚಾಲನೆ

ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಕೆ ಇರ್ವತ್ತೂರಿನಲ್ಲಿ ಯಕ್ಷ ಕಲಾರಂಗ ಕಾರ್ಕಳ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ವತಿಯಿಂದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಉದ್ಘಾಟನಾ ಸಮಾರಂಭ ನೆರವೇರಿತು.
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಕ್ಷ ಕಲಾರಂಗದ ಕಾರ್ಕಳ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ಸಂಚಾಲಕ ಪದ್ಮನಾಭ ಗೌಡ, ಯಕ್ಷದ್ರುವ ಪಟ್ಲ ಫೌಂಡೇಶನ್ ಗೋವಾ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ, ಯಕ್ಷಗುರುಗಳಾದ ಮಹಾವೀರ ಪಾಂಡಿ, ಊರಿನ ಹಿರಿಯರಾದ ಜಯಕೀರ್ತಿ ಕಡಂಬ, ನಿವೃತ್ತ ಶಿಕ್ಷಕ ರಮಾನಾಥ ಶೆಣೈ, ಎಸ್‌ಡಿಎಂಸಿ ಅಧ್ಯಕ್ಷ ಮಧ್ವರಾಜ್, ಶಾಲಾ ಹಿತೈಷಿ ಚಂದ್ರರಾಜ ಅತಿಕಾರಿ, ಗೋಪಾಲ ಪೂಜಾರಿ ಗರಡಿಮನೆ, ಪಂಚಾಯತ್ ಸದಸ್ಯರಾದ ಶೇಖರ ಅಂಚನ್, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕರಾದ ಆನಂದ್ ಪೂಜಾರಿ ಸ್ವಾಗತಿಸಿ, ಅರುಣ್ ಕುಮಾರ್ ಶೇಟ್ ನಿರ್ವಹಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಶಕುಂತಲಾ ರಾವ್ ವಂದಿಸಿದರು.































































































error: Content is protected !!
Scroll to Top