ಈರುಳ್ಳಿಯ ಆರೋಗ್ಯ ಲಾಭಗಳು

ಅಡುಗೆಯಲ್ಲಿ ಬಳಸುವಂತಹ ಈರುಳ್ಳಿ ಬಾಯಿ ರುಚಿಯನ್ನು ಮಾತ್ರ ಹೆಚ್ಚಿಸದೆ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದಷ್ಟೇ ಅಲ್ಲದೆ ಈರುಳ್ಳಿ ಸೇವಿಸುವುದರಿಂದ ತ್ವಚೆಯ ಸಮಸ್ಯೆ ದೂರವಾಗುತ್ತದೆ ಮತ್ತು ನಮ್ಮ ಬುದ್ಧಿ ಶಕ್ತಿಯು ಕೂಡ ಹೆಚ್ಚುತ್ತದೆ. ಸಂಸ್ಕೃತದಲ್ಲಿ ಇದಕ್ಕೆ ಪಲಾಂಡು ಎಂದು ಹೆಸರು.
ಭಾರತದಲ್ಲಿ ಎಲ್ಲೆಡೆ ದಿನನಿತ್ಯ ಅಡುಗೆಯಲ್ಲಿ ಬಳಸುವಂತಹ ತರಕಾರಿ ಇದು. ಇದನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸಬಹುದು.

ಈರುಳ್ಳಿಯ ಗುಣಗಳು
ರುಚಿಯಲ್ಲಿ ಮಧುರ ಹಾಗೂ ಖಾರವಿರುವುದು. ತೀಕ್ಷ್ಣ, ಗುರು ಹಾಗೂ ಜಿಡ್ಡಿನಂಶದಿಂದ ಹೊಂದಿದೆ. ಸ್ವಭಾವದಲ್ಲಿ ಇದು ಅನುಷ್ಣ ಅಂದರೆ ಅಧಿಕ ಉಷ್ಣವಲ್ಲದು. ವಾತ ಹಾಗೂ ಪಿತ್ತವನ್ನು ಸಮತೋಲನದಲ್ಲಿಡುತ್ತದೆ ಕಫವನ್ನು ಸ್ವಲ್ಪ ವೃದ್ಧಿಸುತ್ತದೆ.

ಈರುಳ್ಳಿಯ ಉಪಯೋಗಗಳು
-ಈರುಳ್ಳಿಯಲ್ಲಿ ವಿಟಮಿನ್ ಹಾಗೂ ಪೊಟ್ಯಾಶಿಯಂ ಹೇರಳವಾಗಿರುವುದರಿಂದ ಬಲವನ್ನು ನೀಡುತ್ತದೆ.
-ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
-ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.
-ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯಕ್ಕೂ ಒಳ್ಳೆಯದು.
-ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
-ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
-ಈರುಳ್ಳಿಯೂ ಪೌಷ್ಟಿಕ ಆಹಾರ.
-ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
-ನಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ.
-ಒಂದರಿಂದ ಎರಡು ಚಮಚ ಈರುಳ್ಳಿ ರಸವನ್ನು ಜೇನು ತುಪ್ಪದ ಜೊತೆ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು.
-ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚಿದರೆ ಕೂದಲಿನ ಸಮಸ್ಯೆಗಳು ದೂರವಾಗುತ್ತದೆ. ಡ್ಯಾಂಡ್ರಫ್, ಕೂದಲು ಉದುರುವುದು ಹಾಗೂ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿಯ ರಸವನ್ನು ತಲೆಗೆ ಹಚ್ಚಿ 30 ನಿಮಿಷದ ನಂತರ ತಲೆ ಸ್ನಾನ ಮಾಡಿ.
-ಈರುಳ್ಳಿಯನ್ನು ಹೆಚ್ಚಿದ ನಂತರ ತಕ್ಷಣವೇ ಬಳಸಿ. ಅದನ್ನು ಹಾಗೆಯೇ ಇಡಬಾರದು. ಫ್ರಿಡ್ಜ್ ನಲ್ಲೂ ಇಡಬಾರದು. ಆರೋಗ್ಯಕ್ಕೆ ಒಳ್ಳೆಯದಲ್ಲ
-ಈರುಳ್ಳಿಯನ್ನು ಅಡುಗೆಗೆ ಬಳಸಬಹುದು. ಚಟ್ನಿ, ಸಾಂಬಾರು, ಕೋಸುಂಬರಿ, ಬಜ್ಜಿ, ಗೊಜ್ಜು ಮಾಡಿ ಸೇವಿಸಬಹುದು.
-ಈರುಳ್ಳಿಯ ಕಲ್ಕವನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದು ಹಾಗೂ ಊತ ಕೂಡ ಕಡಿಮೆಯಾಗುವುದು.
-ಈರುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಡಿ.



































































































error: Content is protected !!
Scroll to Top