ಕಾರ್ಕಳ : ಪುರಸಭೆ ಮಾಜಿ ಸದಸ್ಯೆ, ಶತಾಯುಷಿ ನಾಗವೇಣಿ (100 ವ.) ಎ. 30ರಂದು ನಿಧನ ಹೊಂದಿದರು. ಪೆರ್ವಾಜೆ ದೂಳಬೆಟ್ಟುವಿನ ನಾಗವೇಣಿ ಅವರು ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯಾಗಿದ್ದರು. ಶ್ರೀ ಭುವನೇಂದ್ರ ಹೈಸ್ಕೂಲ್ ಕಾರ್ಕಳ ಇಲ್ಲಿ 15 ವರ್ಷ ಟೈಲರಿಂಗ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇಳಿವಯಸ್ಸಿನಲ್ಲೂ ಯೋಗ ಮತ್ತು ಜಪದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ನಾಗವೇಣಿ ಅವರು ಅತ್ಯಂತ ಚುರುಕಿನಿಂದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಮೃತರು ಇಬ್ಬರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಶುಕ್ರವಾರ ದೂಳಬೆಟ್ಟು ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.





