ಮರುಮೌಲ್ಯಮಾಪನ : ಜ್ಞಾನಸುಧಾದ 59 ವಿದ್ಯಾರ್ಥಿಗಳಿಗೆ ರಾಜ್ಯಕ್ಕೆ ಅಗ್ರ 10ರೊಳಗಿನ ರ‍್ಯಾಂಕ್

ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ಮಣಿಪಾಲ ಜ್ಞಾನಸುಧಾದ ಅಶ್ವಿನ್‌

ಕಾರ್ಕಳ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಶ್ವಿನ್ ವಿ. ಶೆಟ್ಟಿ 597 ಅಂಕದೊಂದಿಗೆ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಈಗಾಗಲೇ ಪ್ರಕಟಗೊಂಡ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾದ ವೈಷ್ಣವಿ ಕುಲಕರ್ಣಿ, ಚೈತ್ರಿಕಾ ಚೌದರಿ ಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಪಡೆದಿದ್ದು ಒಟ್ಟು ಜ್ಞಾನಸುಧಾದ ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಂತಾಗಿದೆ.
ಮರು ಮೌಲ್ಯಮಾಪನದ ಬಳಿಕ ಒಟ್ಟು ಜ್ಞಾನಸುಧಾದ 59 ವಿದ್ಯಾರ್ಥಿಗಳು ರಾಜ್ಯಕ್ಕೆ ಅಗ್ರ 10ರೊಳಗಿನ ರ‍್ಯಾಂಕ್ ಪಡೆದಿದ್ದಾರೆ. ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾವು ಶೇ.100 ಫಲಿತಾಂಶವನ್ನು ದಾಖಲಿಸಿದ್ದು, ಒಟ್ಟು 966 ವಿದ್ಯಾರ್ಥಿಗಳಲ್ಲಿ 889(92%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಮೂರನೇ ಅಂಗ ಸಂಸ್ಥೆಯಾದ ಮಣಿಪಾಲ ಜ್ಞಾನಸುಧಾದಲ್ಲಿಯೂ ರ‍್ಯಾಂಕ್ ಪಡೆದಿರುವುದು ಸಂತಸವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.





























































































error: Content is protected !!
Scroll to Top