ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಸರಬರಾಜು – 136 ಕೋಟಿ ರೂ. ಒಪ್ಪಂದ

ಬೆಂಗಳೂರು : ತಿರುಪತಿ ಲಡ್ಡು ತಯಾರಿಕೆಯಲ್ಲಿ ಕರ್ನಾಟಕದ ʼನಂದಿನಿ’ ತುಪ್ಪದ ಘಮಲು ಮತ್ತೆ ಮರಳಿದೆ. ಬಮೂಲ್‌ (ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ) ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ನಂದಿನಿ ತುಪ್ಪ ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡಿದೆ. ತಿರುಪತಿ ಲಡ್ಡು ತಯಾರಿಕೆಗೆ 2 ದಶಕಗಳಿಂದ ಕರ್ನಾಟಕದ ಪ್ರಸಿದ್ಧ ಸಂಸ್ಥೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಆದರೆ, 2022-23ನೇ ಸಾಲಿನಲ್ಲಿ ದರದ ವಿಚಾರದಲ್ಲಿ ನಂದಿನಿ ತುಪ್ಪದ ಪೂರೈಕೆ ಸ್ಥಗಿತವಾಗಿತ್ತು. 2024ರಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ಆರೋಪ ಕೇಳಿಬಂದಿತ್ತು. ಈ ವಿವಾದವು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
ಇದೀಗ ಟಿಟಿಡಿ ಬಮೂಲ್‌ನಿಂದ 2 ಸಾವಿರ ಟನ್‌ ನಂದಿನಿ ತುಪ್ಪ ಖರೀದಿಗೆ 136 ಕೋಟಿ ರೂ. ಮೊತ್ತದ ಟೆಂಡರ್‌ ನೀಡಿದೆ. ನಿಯಮಾವಳಿಯಂತೆ ಆರು ತಿಂಗಳೊಳಗೆ ಬಮೂಲ್‌ ತುಪ್ಪ ಪೂರೈಸಲಿದೆ.































































































error: Content is protected !!
Scroll to Top