ಸಿದ್ದರಾಮಯ್ಯ – ಡಿಕೆ ಶಿವಕುಮಾರ್‌ ಜತೆ ಹೈಕಮಾಂಡ್‌ ಮಹತ್ವದ ಸಭೆ

ಬೆಂಗಳೂರು : ನಾಯಕತ್ವ ಬದಲಾವಣೆ ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧ ಚರ್ಚಿಸಲು ಹೈಕಮಾಂಡ್ ಸಿದ್ಧರಾಮಯ್ಯ ಅವರಿಗೆ ಬುಲಾವ್ ನೀಡಿದ್ದು ಇಂದು ನಡೆಯಲಿರುವ ಹೈಕಮಾಂಡ್‌ ಮಹತ್ವದ ಸಭೆಯಲ್ಲಿ ಸಂಧಾನ ಸೂತ್ರ ನಡೆಯುತ್ತಾ ಅಥವಾ ಸಿಎಂ ಬದಲಾವಣೆ ನಿರ್ಧಾರವಾಗುತ್ತಾ ಎಂಬ ಪ್ರಶ್ನೆ ಕಾಣ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದಲೂ ಸೀಟ್ ಶೇರ್ ಫೈಟಿಂಗ್ ನಡೆಯುತ್ತಲೇ ಇದೆ. ಈಗ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಗೆ ಮುಹೂರ್ತ ಕೂಡಿ ಬಂತಾ ಎಂಬ ಚರ್ಚೆ ಶುರುವಾಗಿದೆ. ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಈ ಸಭೆ ನಿಗದಿಯಾಗಿದೆ. ಸಭೆಯಲ್ಲಿ ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಈ ನಾಲ್ವರ ಸಿಟ್ಟಿಂಗ್‌ನಲ್ಲಿ ಕುರ್ಚಿ ಕದನಕ್ಕೆ ಮದ್ದರೆಯುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಇಂದಿನ ಸಭೆ ಕರ್ನಾಟಕ ಕಾಂಗ್ರೆಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಇನ್ನು ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ತಮ್ಮ ಜೊತೆಗೆ ಸಚಿವರ ದಂಡನ್ನು ಕೊಂಡೊಯ್ದಿದ್ದಾರೆ. ದೆಹಲಿ ಭೇಟಿ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದು, ಹೇಳೋದೇನಿದೆ. ಎಲ್ಲವೂ ನಿಮಗೆ ಗೊತ್ತಲ್ವಾ ಎಂದಿದ್ದಾರೆ. ಸಿದ್ದರಾಮಯ್ಯ ನಡೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಹೈಕಮಾಂಡ್ ಮುಂದೆ ಯಾವುದೇ ಚಾನ್ಸ್ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿರುವ ಅವರು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮನಸ್ಸು ಮಾಡಿದರೆ ಬೇರೆಯದ್ದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಹಿರಿಯ ಸಚಿವರ ಮೂಲಕ ಒತ್ತಡ ಹಾಕಿಸುವ ಪ್ಲ್ಯಾನ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಜೊತೆ ಗೃಹಸಚಿವ ಪರಮೇಶ್ವರ್, ಸಚಿವ ಎಂ.ಬಿ ಪಾಟೀಲ್, ಹೆಚ್.ಸಿ ಮಹದೇವಪ್ಪ, ಬೈರತಿ ಸುರೇಶ್, ಕೆಜೆ ಜಾರ್ಜ್, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್ ಹಾಗೂ ಶಾಸಕ ಪೊನ್ನಣ್ಣ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಇತ್ತ ಡಿಕೆ ನೊಣವಿಕೆರೆ ಅಜ್ಜಯ ಭೇಟಿ ಮಾಡಿದ್ದಾರೆ. ಈ ಮಧ್ಯೆ ದೆಹಲಿಗೆ ಡಿಕೆಶಿ ಸಹ ಹೋಗ್ತಾರೆ ಎಂದಿದ್ದ ಮಾಧ್ಯಮಗಳ ವರದಿ ಸತ್ಯವಾಗಿದೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದೆಹಲಿಗೆ ಹೋಗುತ್ತಿದ್ದೇನೆ. ಕೆಲವೊಂದು ಸಂದರ್ಭದಲ್ಲಿ ಹೋಗಬೇಕಾಗುತ್ತದೆ ಎಂದಿದ್ದಾರೆ.









































































error: Content is protected !!
Scroll to Top