ಬೆಂಗಳೂರು : ರಾಜ್ಯಸಭಾ ಚುನಾವಣೆಯ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನಪರಿಷತ್ ಎಲೆಕ್ಷನ್ಗೂ ದಿನಾಂಕ ಪ್ರಕಟಗೊಂಡಿದೆ. ಕಾಂಗ್ರೆಸ್ನ 3, ಬಿಜೆಪಿಯ 3 ಮತ್ತು ಜೆಡಿಎಸ್ನ ಒಂದು ಸದಸ್ಯರ ಅವಧಿ ಜೂನ್ನಲ್ಲಿ ಮುಕ್ತಾಯವಾಗಲಿದ್ದು, ಈ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ.
ಚುನಾವಣೆ ಅಧಿಸೂಚನೆ : ಜೂನ್ 01
ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ : ಜೂನ್ 08
ನಾಮಪತ್ರ ಪರಿಶೀಲನೆ: ಜೂನ್ 09
ನಾಮಪತ್ರ ಹಿಂಪಡೆಯಲು ಕೊನೇ ದಿನ: ಜೂನ್ 11
ಮತದಾನ : ಜೂನ್ 18
ಫಲಿತಾಂಶ : ಜೂನ್ 18
ಬಿ.ಕೆ. ಹರಿಪ್ರಸಾದ್, ನಾಸೀರ್ ಅಹ್ಮದ್, ತಿಪ್ಪಣ್ಣ, ಪ್ರತಾಪ್ ಸಿಂಹ ನಾಯಕ್, ಎನ್. ನಾಗರಾಜು (ಎಂಟಿಬಿ), ಸುನಿಲ್ ವಲ್ಯಾಪುರ ಮತ್ತು ಗೋವಿಂದರಾಜು ಅವರ ಅಧಿಕಾರ ಅವಧಿಯು ಜೂನ್ನಲ್ಲಿ ಮುಕ್ತಾಯವಾಗಲಿದೆ.

























