ಕ್ರೈಸ್ಟ್‌ಕಿಂಗ್‌ ಪಿಯು ಕಾಲೇಜಿಗೆ ಮೋಸ್ಟ್ ಪ್ರಾಮಿಸಿಂಗ್ ಆ್ಯಂಡ್ ಟ್ರಸ್ಟೆಡ್ ಇನ್ಸ್ಟಿಟ್ಯೂಷನ್‌ ಆವಾರ್ಡ್‌

ಕಾರ್ಕಳ : ದಿ ಗ್ರೇಟ್ ಇಂಡಿಯನ್ ಎಂಟರ್‌ಪ್ರೆನರ್‌ಶಿಫ್, ಬ್ಯುಸಿನೆಸ್ ಹಾಗೂ ಸ್ಟಾರ್ಟಪ್ ಸಂಸ್ಥೆಯು ಕೊಡಮಾಡುವ ಭಾರತದ ಎಲೈಟ್ ಎಜ್ಯುಕೇಷನ್ ಹಾಗೂ ಇನ್ಸ್ಟಿಟ್ಯೂಷನಲ್ ಎಕ್ಷಲೆನ್ಸ್ ಪ್ರಶಸ್ತಿಯ ಅಡಿಯಲ್ಲಿ 2024ನೇ ಸಾಲಿನ “ಮೋಸ್ಟ್ ಪ್ರಾಮಿಸಿಂಗ್ ಹಾಗೂ ಟ್ರಸ್ಟೆಡ್ ಪದವಿ ಪೂರ್ವ ಕಾಲೇಜು- 2024” ಪ್ರಶಸ್ತಿಯನ್ನು ಕಾರ್ಕಳ ಕ್ರೈಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜು ಮುಡಿಗೇರಿಸಿಕೊಂಡಿದೆ.

ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ, ಅತ್ಯುತ್ತಮ ಆಡಳಿತ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಶಿಕ್ಷಣ ಹಾಗೂ ನಿರಂತರವಾಗಿ ದಾಖಲಿಸಿದ ಅತ್ಯುತ್ತಮ ಫಲಿತಾಂಶಗಳ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಅ. 25ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಂಕರ್ ಹ್ಯಾಬಿಟೇಟ್ ಟೆಕ್ನಾಲಜಿ ಗ್ರೂಪ್‌ನ ಮುಖ್ಯಸ್ಥ ಪದ್ಮಶ್ರೀ ಡಾ. ಗೋಪಾಲನ್ ನಾಯರ್ ಅವರು ಪ್ರಶಸ್ತಿ ಪದ್ರಾನ ಮಾಡಿದರು. ಕ್ರೈಸ್ಟ್‌ಕಿಂಗ್‌ ಆಡಳಿತ ಮಂಡಳಿಯ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಖ್ಯಾತ ಮನೋರೋಗ ತಜ್ಞ ಪದ್ಮಶ್ರೀ ಡಾ. ಸಿ. ಆರ್. ಚಂದ್ರಶೇಖರ್ ಹಾಗೂ ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರದ ಮಾಜಿ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಶ್ರೀಕಂಠೇಶ್ವರ ಸ್ವಾಮಿ ಉಪಸ್ಥಿತರಿದ್ದರು.



















































































error: Content is protected !!
Scroll to Top