ತರಗತಿಯಲ್ಲಿ ವಿದ್ಯಾರ್ಥಿಗೆ ಟೆರರಿಸ್ಟ್‌ ಎಂದು ಕರೆದ ಆರೋಪ – ಉಪನ್ಯಾಸಕ ಅಮಾನತು

ಬೆಂಗಳೂರು : ಉಪನ್ಯಾಸಕರೊಬ್ಬರು ಮುಸ್ಲಿಮ್ ವಿದ್ಯಾರ್ಥಿಯನ್ನು ತರಗತಿಯ ವೇಳೆ 13 ಬಾರಿ ‘ಟೆರರಿಸ್ಟ್’ ಎಂದು ಕರೆದಿದ್ದಾರೆ ಎಂಬ ಗಂಭೀರ ಆರೋಪ ನಗರದ ಪಿಇಎಸ್ ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‌ನಲ್ಲಿ ಕೇಳಿ ಬಂದಿದೆ.

ವಿದ್ಯಾರ್ಥಿ ಹೇಳುವಂತೆ, ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲೇ ಉಪನ್ಯಾಸಕರು ಧಾರ್ಮಿಕ ಮತ್ತು ಪ್ರಚೋದನಾಕಾರಿ ಪದಗಳನ್ನು ಬಳಸಿ ಅವಮಾನಿಸಿದ್ದಾರೆ. ​ಅಂತಾರಾಷ್ಟ್ರೀಯ ಸಂಘರ್ಷಗಳು ಮತ್ತು ರಾಜಕೀಯ ವ್ಯಕ್ತಿಗಳ ಹೆಸರನ್ನ ಎಳೆದು ತಂದು ವಿದ್ಯಾರ್ಥಿಯ ಧರ್ಮವನ್ನು ನಿಂದಿಸಿದ್ದಾರೆ.​ HOD ಅವರ ಸಮ್ಮುಖದಲ್ಲೂ ಉಪನ್ಯಾಸಕರು ಇದೇ ರೀತಿಯ ಅವಹೇಳನಕಾರಿ ಪದಗಳನ್ನು ಮುಂದುವರಿಸಿದ್ದಾರೆ. ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿಯ ಪರವಾಗಿ ಧ್ವನಿ ಎತ್ತಿದ 3 ರಿಂದ 4 ವಿದ್ಯಾರ್ಥಿಗಳನ್ನು ಕೂಡ ಕಾಲೇಜು ಆಡಳಿತ ಮಂಡಳಿಯು ಅಮಾನತು ಮಾಡಿದೆ. ತಪ್ಪು ಮಾಡಿದ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಾಕ್ಷಿ ನುಡಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪ ಮಾಡಲಾಗಿದೆ.

ಇನ್ನೂ ಪಿಇಎಸ್‌ ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಯನ್ನ ಉಗ್ರ ಎಂದಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ, ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಬಹಿರಂಗವಾದ ಬಳಿಕ ಪಿಇಎಸ್ ವಿಶ್ವವಿದ್ಯಾಲಯ ಆಡಳಿತ ತಕ್ಷಣ ಕ್ರಮ ಕೈಗೊಂಡಿದ್ದು, ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದೆ. ಮಾರ್ಚ್ 27ರ ಅಧಿಕೃತ ಆದೇಶದಲ್ಲಿ, “ವಿದ್ಯಾರ್ಥಿಯಿಂದ ಬಂದ ದೂರನ್ನು ಸ್ವೀಕರಿಸಲಾಗಿದೆ. ಪ್ರಕರಣದ ಕುರಿತು ಸಮಗ್ರ ವಿಚಾರಣೆ ನಡೆಯುವವರೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಉಲ್ಲೇಖಿಸಿ ಆದೇಶ ನೀಡಲಾಗಿದೆ. ಈ ಆದೇಶಕ್ಕೆ ಕುಲಪತಿಗಳು ಸಹಿ ಹಾಕಿದ್ದಾರೆ. ಆದರೆ, ಘಟನೆಯ ಸ್ವರೂಪದ ಬಗ್ಗೆ ಹೆಚ್ಚಿನ ವಿವರ ಅಮಾನತು ಆದೇಶದಲ್ಲಿ ನೀಡಲಾಗಿಲ್ಲ ಎಂದು ವರದಿಯಾಗಿದೆ.

















































error: Content is protected !!
Scroll to Top