ಗದ್ದೆಯಲ್ಲಿ ಬೈಹುಲ್ಲಿನ ಪಿಂಡಿ ಕಟ್ಟುತ್ತಿದ್ದಾಗ ಟ್ರ್ಯಾಕ್ಟರ್‌ನಿಂದ ಬಿದ್ದು ಚಾಲಕ ಸಾವು

ಕಾರ್ಕಳ : ಭತ್ತದ ಗದ್ದೆಯಲ್ಲಿ ಬೈಹುಲ್ಲಿನ ಪಿಂಡಿ ಮಾಡುತ್ತಿದ್ದಾಗ ಟ್ರ್ಯಾಕ್ಟರ್‌ನಿಂದ ಬಿದ್ದು ಚಾಲಕ ಸಾವನಪ್ಪಿದ ದುರ್ಘಟನೆ ಮಾ. 27ರಂದು ಯರ್ಲಪಾಡಿಯಲ್ಲಿ ನಡೆದಿದೆ. ಶಿವಮೊಗ್ಗದ ಶ್ರೀಧರ್‌ ಮೃತ ದುರ್ದೈವಿ. ಹೊಸೊಕ್ಲು ನೆಲೆ ಬೈಲುವಿನ ಸುಂದರ ಪೂಜಾರಿಯವರ ಗದ್ದೆಯಲ್ಲಿ ಶ್ರೀಧರ್‌ ಅವರು ಭತ್ತದ ಪಿಂಡಿ ಮಾಡುತ್ತಿರುವಾಗ ಟ್ರಾಕ್ಟರ್‌ನಿಂದ ಕೆಳಗೆ ಬಿದ್ದಿದ್ದು, ಪರಿಣಾಮವಾಗಿ ಟ್ರಾಕ್ಟರ್‌ನ ಹಿಂಬದಿಯ ಮೇಸಿನ್‌ ಅವರ ತಲೆಗೆ ತಾಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

















































error: Content is protected !!
Scroll to Top