ಪೊಲೀಸ್‌ ಗಡಿಪಾರು ಆದೇಶ ಜಾರಿ ಮಾಡಲು ಹೋದಾಗ ಆರೋಪಿ ಕಾರನ್ನು ಮರಕ್ಕೆ ಡಿಕ್ಕಿ ಹೊಡೆದು ಪರಾರಿ

ಮಲ್ಪೆ : ಪೊಲೀಸ್‌ ಗಡಿಪಾರು ಆದೇಶ ಜಾರಿ ಮಾಡಲು ಹೋದಾಗ ಆರೋಪಿಯು ಕಾರನ್ನು ಮರಕ್ಕೆ ಡಿಕ್ಕಿ ಹೊಡೆದು ಓಡಿ ಹೋದ ಘಟನೆ ಮಾ. 27ರಂದು ನಡೆದಿದೆ.
ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಶಿವಕುಮಾರ್ ಎಸ್. ಆರ್. ಅವರು ಪೊಲೀಸ್ ಅಧೀಕ್ಷಕರ ಆದೇಶದಂತೆ ಮಹಮ್ಮದ್ ಫೈಜಲ್ ಎಂಬವರಿಗೆ ಹೊರ ಜಿಲ್ಲೆಗೆ ಗಡಿ ಪಾರು ಆದೇಶದ ಪ್ರತಿಯನ್ನು ಜಾರಿ ಮಾಡುವುದಕ್ಕಾಗಿ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರ ಇರುವಿಕೆಯನ್ನು ಖಚಿತಪಡಿಸಿಕೊಂಡು ಹೋದಾಗ ಮಹಮ್ಮದ್ ಫೈಜಲ್‌ನು ತಾನು ಕುಳಿತುಕೊಂಡಿದ್ದ ಕಾರನ್ನು ಒಮ್ಮಲೇ ಹಿಮ್ಮುಖವಾಗಿ ಚಲಿಸಿದಾಗ ರಸ್ತೆಯ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಓಡಿ ಹೋಗಿರುತ್ತಾನೆ. ಈ ವೇಳೆ ಕಾರು ಜಖಂಗೊಡಿರುತ್ತದೆ. ಈ ಅಪಘಾತಕ್ಕೆ ಮಹಮ್ಮದ್ ಫೈಜಲ್‌ನ ಅಜಾಗರೂಕತೆ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top