ಮಂಗಳೂರು: ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಚೂರಿ ಇರಿದು ಗಂಡನೇ ಕೊಲೆ ಮಾಡಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸೊನಾಲಿ(30) ಎಂದು ಗುರುತಿಸಲಾಗಿದೆ. ಆಕೆಯ ಗಂಡ ಶಿವಲಿಂಗಪ್ಪ ಆರೋಪಿ. ಸೊನಾಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನುವ ಸಂದೇಹದಲ್ಲಿ ಶಿವಲಿಂಗಪ್ಪ ಈ ಕುಕೃತ್ಯ ಎಸಗಿರುವುದಾಗಿದೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.






































