ಯುವತಿ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್
ಮೂಡಬಿದಿರೆ: ಆನ್‌ಲೈನ್ ಗೇಮ್ ಪಾರ್ಟ್ನರ್‌ನನ್ನು ಪ್ರೀತಿಸಿ ಅವನನ್ನು ಭೇಟಿ ಮಾಡಲು ಮೂಡಬಿದಿರೆಯ ಯುವತಿಯೊಬ್ಬಳು ಉತ್ತರ ಪ್ರದೇಶದ ಲಕ್ನೋಗೆ ತೆರಳಿದ್ದಾಗಿ ತಿಳಿದು ಬಂದಿದೆ.
ಯುವತಿಯನ್ನು ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ರಮ್ಯಾ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿರುವ ರಮ್ಯಾ ಮನೆಯಲ್ಲಿದ್ದರು. ಮೊಬೈಲ್‌ನಲ್ಲಿ ಫ್ರೀ ಫೈರ್ ಆಟವಾಡುತ್ತಿದ್ದ ಆಕೆಗೆ ಆನ್‌ಲೈನ್ ಆಟದ ಮೂಲಕ ಉತ್ತರ ಪ್ರದೇಶದ ಲಕ್ನೋ ನಿವಾಸಿ ಅಮನ್ ವರ್ಮ ಎಂಬ ಯುವಕನ ಪರಿಚಯವಾಗಿತ್ತು. ಕಳೆದ ಒಂದು ವರ್ಷದಿಂದ ಇವರಿಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ರಮ್ಯಾ ಅವರು ಆ. 29 ರಿಂದ ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಲಕ್ನೋದಲ್ಲಿ ಇರುವುದು ತಿಳಿದು ಬಂದಿತ್ತು. ಅಲ್ಲಿಗೆ ತೆರಳಿದ ಪೊಲೀಸರು ಅವಳನ್ನು ಪತ್ತೆ ಮಾಡಿದ್ದಾರೆ.
ತಾನು ಪ್ರಬುದ್ಧಳಾಗಿದ್ದು, ಸ್ವಇಚ್ಛೆಯಿಂದ ಲಕ್ನೋಗೆ ಬಂದಿದ್ದಾಗಿ ತಿಳಿಸಿದ್ದಾಳೆ. ಅರ್ಮನ್ ಮತ್ತು ತಾನು ಪ್ರೀತಿಸುತ್ತಿದ್ದು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾಳೆ.



































