ಕಾರ್ಕಳ: ಪಿಡಬ್ಲ್ಯೂಡಿಯವರು ರೋಡ್ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿದ್ಯುತ್ ಮಾರ್ಗದ ಸ್ಥಳಾಂತರದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಾರ್ಕಳದ ಕೆಲವು ಪ್ರದೇಶಗಳಲ್ಲಿ ಅ.13 ಮಂಗಳವಾರದಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆ ಸ್ ಕಾಂ ಕಾರ್ಕಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆ ಹೊ ರಚಿಸಿದ್ದಾರೆ.
110/11ಕೆವಿ ಕಾರ್ಕಳ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಮುಂಡ್ಲಿ, ದುರ್ಗಾ, ಬಂಡೀಮಠ ಫೀಡರುಗಳಲ್ಲಿ ಬೆಳಿಗ್ಗೆ 09:30 ಗಂಟೆಯಿಂದ ಅಪರಾಹ್ನ 5:30ಗಂಟೆಯವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ಜೋಡುರಸ್ತೆ, ಬಂಗ್ಲೆಗುಡ್ಡೆ, ತೆಳ್ಳಾರು ರೋಡ್, ಪೆರ್ವಾಜೆ, ಬಂಡೀಮಠ ಬಸ್ ಸ್ಟ್ಯಾಂಡ್‌ಏರಿಯಾ, ಪತ್ತೊಂಜಿಕಟ್ಟೆ, ಕಲ್ಲೊಟ್ಟೆ, ಕಡಂಬಲ, ನಾರ್ಕಟ್ಟ, ಮಲೆಬೆಟ್ಟು, ಪೊಲ್ಲಾರು, ತೆಲ್ಲಾರು, ಮುಂಡ್ಲಿ, ಪಲಾಯಿ ಬಾಕ್ಯಾರು.



































