ಪಶ್ಚಿಮ ಬಂಗಾಳದ ಅರಾಜಕತೆ ಅಂತ್ಯವಾಗಿದೆ – ಸುನಿಲ್‌ ಕುಮಾರ್‌

ಉಡುಪಿ : ಪಶ್ಚಿಮ ಬಂಗಾಳವನ್ನು ಸುದೀರ್ಘ ಕಾಲದಿಂದ ಕಾಡುತ್ತಿದ್ದ ಅರಾಜಕತೆಗೆ ಕೊನೆಗೂ ಅಲ್ಲಿನ ಮತದಾರ ಅಂತ್ಯ ಹಾಡಿದ್ದಾರೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಕನಸು ಇಂದು ನನಸಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾ ದೇಶದ ಮತಾಂಧರಿಗೆ ದೇಶದ ಹೆಬ್ಬಾಗಿಲು ತೆರೆದು ಸ್ವಾಗತಿಸಿ ಅವರನ್ನೇ ತನ್ನ ಮತಬ್ಯಾಂಕ್ ಆಗಿಸಿಕೊಂಡು ಕ್ರೂರ ದಬ್ಬಾಳಿಕೆ ನಡೆಸುತ್ತಿದ್ದ ಮಮತಾ ಬ್ಯಾನರ್ಜಿಯವರ ದುಷ್ಟ ಅಟ್ಟಹಾಸವನ್ನು ಕುಟ್ಟಿ ಬಿಸಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ‌ ಮತ್ತು ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್ ಯಶಸ್ವಿಯಾಗಿದ್ದಾರೆ. ಅವರ ಪ್ರಯತ್ನ ಅವರ್ಣನೀಯ. ತೃಣಮೂಲ ಕಾಂಗ್ರೆಸ್ ನ ಗೂಂಡಾಗಿರಿ ರಾಜಕಾರಣಕ್ಕೆ ಕೊನೆ ಹಾಡಲಾಗಿದೆ. ಅದೇ ರೀತಿ ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಪುದುಚೇರಿ ಯಲ್ಲಿ ಎನ್‌ಡಿಎ ಗೆಲುವು ಅಭೂತಪೂರ್ವ. ಒಟ್ಟಾರೆ ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ಕಾರಣರಾದ ದೇವದುರ್ಲಬ ಕಾರ್ಯಕರ್ತರ ಅವಿಶ್ರಾಂತ ಶ್ರಮಕ್ಕೆ ಸುನಿಲ್‌ ಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.



































































































error: Content is protected !!
Scroll to Top