ವೈಕುಂಠ ಬಾಳಿಗ ಕಾನೂನು ಕಾಲೇಜು ಪ್ರಾಚಾರ್ಯೆ ಸುರೇಖಾ ಕೆ. ಅವರಿಗೆ ಪಿ.ಎಚ್.ಡಿ ಪದವಿ

ಕಾರ್ಕಳ : ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಚಾರ್ಯೆ ಸುರೇಖಾ ಕೆ. ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು “A Critical Study on the Enforcement of the Decisions of International Court of Justice” ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ.ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನು ಪ್ರಸನ್ನನ್ ಅವರಿಂದ ಮಾರ್ಗದರ್ಶನ ಪಡೆದಿದ್ದರು.

ಸುರೇಖಾ ಕಾರ್ಕಳ ನಕ್ರೆ ಹೆಂಡಾಲು ಮನೆಯ ಕೃಷ್ಣ ಕೆ. ಮಾಬಿಯನ್‌ ಮತ್ತು ದಿ. ಗಿರಿಜಾ ದಂಪತಿಯ ಪುತ್ರಿ. ಆದಿಉಡುಪಿಯ ಸದಾಶಿವ ಅವರ ಪತ್ನಿ. ವೈಕುಂಠ ಬಾಳಿಗದಲ್ಲಿ ಎಲ್‌ಎಲ್‌ಬಿ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಎಂ ಶಿಕ್ಷಣ ಪಡೆದಿರುವ ಇವರು ವೈಕುಂಠ ಬಾಳಿಗದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿ ಪ್ರಸ್ತುತ ಪ್ರಾಚಾರ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.



































































































error: Content is protected !!
Scroll to Top