ಕಾರ್ಕಳ : ಒಡಹುಟ್ಟಿದ ಅಣ್ಣನನ್ನೇ ಕೊಲೆಗೈದ ತಮ್ಮ

ಕಾರ್ಕಳ : ಒಡಹುಟ್ಟಿದ ತಮ್ಮನೇ ಅಣ್ಣನಿಗೆ ಮರದ ರೀಪಿನಿಂದ ಹೊಡೆದು ಹತ್ಯೆಗೈದ ಘಟನೆ ಕಾರ್ಕಳದಲ್ಲಿ ಮೇ 2ರ ತಡರಾತ್ರಿ ನಡೆದಿದೆ. ರಿಚರ್ಡ್‌ ಡಿಸೋಜಾ (65) ಎಂಬವರೇ ಹತ್ಯೆಗೀಡಾದ ವ್ಯಕ್ತಿ. ಅಣ್ಣ ಹೆರಾಲ್ಡ್‌ ಡಿಸೋಜಾ ಅವರ ಮನೆಯಲ್ಲೇ ಇರುವ ರಿಚರ್ಡ್‌ ಡಿಸೋಜಾ ಅವರು ಶನಿವಾರ ರಾತ್ರಿ ಕುಡಿದು ಗಲಾಟೆ ಮಾಡಿದ್ದು ಈ ಸಂದರ್ಭ ಸಿಟ್ಟಾದ ಹೆರಾಲ್ಡ್‌ ರೀಪಿನಿಂದ ಹಲ್ಲೆಗೈದಿರುತ್ತಾರೆ. ತೀವ್ರಸ್ವರೂಪದ ಗಾಯಗೊಂಡ ರಿಚರ್ಡ್‌ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ರಿಚರ್ಡ್‌ ಅವರ ಪತ್ನಿ, ಮೂವರು ಮಕ್ಕಳು ಶಿರ್ವ ಸಮೀಪದ ಮಂಚಕಲ್ಲಿನಲ್ಲಿ ವಾಸವಾಗಿದ್ದು, ರಿಚರ್ಡ್‌ ಆಗೊಮ್ಮೆ ಹೀಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದರು. ಗಲಾಟೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಆಸ್ತಿ ವಿಚಾರವೂ ಇರಬೇಕೆಂದು ಎನ್ನಲಾಗುತ್ತಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.































































































error: Content is protected !!
Scroll to Top