ಅತ್ತೂರು ಪದವು ಮತ್ತು ಸಾಯಿಬಾಬ ಮಂದಿರ ಬಳಿ ಬೆಂಕಿ

ಕಾರ್ಕಳ : ಅತ್ತೂರು ಪದವು ಮತ್ತು ಸಾಯಿಬಾಬ ಮಂದಿರದ ಬಳಿ ಮೇ 5ರಂದು ಅಗ್ನಿ ಅವಘಡ ಸಂಭವಿಸಿದೆ.
ಮಧ್ಯಾಹ್ನದ ವೇಳೆಗೆ ಅತ್ತೂರು ಪದವು ಬಳಿ ಬೆಂಕಿ ಹತ್ತಿಕೊಂಡಿದ್ದು, ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದರು. ಇದೇ ವೇಳೆ ಪುರಸಭಾ ವ್ಯಾಪ್ತಿಯ ಸಾಯಿಬಾಬ ಮಂದಿರದ ಬಳಿಯೂ ಅಗ್ನಿ ಅವಘಡ ಸಂಭವಿಸಿದೆ. ಸುಮಾರು 4 ಎಕರೆ ಪ್ರದೇಶದಲ್ಲಿ ಬೆಂಕಿ ಆವರಿಸಿಕೊಂಡಿದೆ. ಟ್ರಾನ್ಸ್‌ಫಾರ್ಮರ್‌ ಕಂಬದ ಶಾಟ್‌ಸರ್ಕೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ. ಬಿಸಿಲ ಬೇಗೆಗೆ ಕ್ಷಣಮಾತ್ರದಲ್ಲಿ ಸುತ್ತಲಿನ ಒಣ ಹುಲ್ಲಿಗೆ ಬೆಂಕಿ ಆವರಿಸಿಕೊಂಡಿದೆ.



































































































error: Content is protected !!
Scroll to Top